×
Ad

ಅರಬ್ಬಿ ಸಮುದ್ರದಲ್ಲಿ ಮುಳುಗಿದ ಸರಕು ಸಾಗಾಟದ ಹಡಗು: 15 ಮಂದಿ ಅಪಾಯದಲ್ಲಿ

Update: 2017-12-01 20:58 IST
ಸಾಂದರ್ಭಿಕ ಚಿತ್ರ

ಮಂಗಳೂರು, ಡಿ. 1: ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಸಾಗಾಟದ ಎರಡು ಹಡಗುಗಳ ಪೈಕಿ ಒಂದು ಸಣ್ಣ ಹಡಗು (ಮಂಜಿ) ಅರಬ್ಬಿ ಸಮುದ್ರದಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು, ಇನ್ನೊಂದು ಭಾಗಶಃ ಮುಳುಗಡೆಯಾಗಿದೆ. ಘಟನೆಯಲ್ಲಿ ಎರಡೂ ಹಡಗುಗಳಲ್ಲಿರುವ ಸುಮಾರು 15 ಮಂದಿ ಅಪಾಯದಲ್ಲಿದ್ದಾರೆ ಎಂದು ಹೇಳಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಓಖಿ ಚಂಡಮಾರುತ ಸೃಷ್ಟಿಯಾಗಿತ್ತು. ಕೇರಳ ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ಮುಂಜಾಗ್ರತೆ ವಹಿಸುಂತೆ ಸೂಚಿಸಲಾಗಿತ್ತು. ಇದೀಗ ಲಕ್ಷದ್ವೀಪದಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ಕರವತ್ತಿ ದ್ವೀಪದಲ್ಲಿ ಸಂಚರಿಸುತ್ತಿದ್ದ ಸರಕು ಸಾಗಾಟದ ಎರಡು ಸಣ್ಣ ಹಗಡು (ಮಂಜಿ)ಗಳಲ್ಲಿ ಒಂದು ಸಂಪೂರ್ಣ ಮುಳುಗಡೆಯಾಗಿದೆ. ಈ ಹಡಗಿನಲ್ಲಿ ಏಳೆಂಟು ಮಂದಿ ಸಿಬ್ಬಂದಿಗಳಿದ್ದು, ಅಪಾಯದಲ್ಲಿದ್ದಾರೆ ಎಂದು ಲೈಫ್‌ಗಾರ್ಡ್ ತಂಡದ ಸದಸ್ಯರು ತಿಳಿಸಿದ್ದಾರೆ.

ಘಟನೆಯಲ್ಲಿ ಕರವತ್ತಿ ದ್ವೀಪದಲ್ಲಿ ಸರಕು ಸಾಗಾಟದ ಇನ್ನೊಂದು ಸಣ್ಣ ಹಡಗು ಕೂಡ ಚಂಡಮಾರುತಕ್ಕೆ ತುತ್ತಾಗಿದ್ದು, ಮುಳುಗಡೆಯ ಹಂತದಲ್ಲಿದೆ ಎಂದು ಹೇಳಲಾಗಿದೆ. ಈ ಹಡಗಿನಲ್ಲಿ ಸುಮಾರು 8 ಮಂದಿ ಸಿಬ್ಬಂದಿಗಳಿದ್ದು, ಇವರ ರಕ್ಷಣಾ ಕಾರ್ಯ ಸಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಮುಳುಗಡೆಗೊಂಡಿರುವ ಹಡಗಿನಲ್ಲಿರುವ ಸಿಬ್ಬಂದಿಗಳ ಪೈಕಿ ಕೆಲವರು ನೀರು ಪಾಲಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News