ಡಿ.2ರಿಂದ ಕಿಶೋರ ಯಕ್ಷ ಸಂಭ್ರಮ
Update: 2017-12-01 21:29 IST
ಉಡುಪಿ, ಡಿ.1: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಪ್ರತಿವರ್ಷ ಆಯೋಜಿಸುತ್ತಿರುವ ಕಿಶೋರ ಯಕ್ಷಸಂಭ್ರಮದ ದಶಮಾನೋತ್ಸವ ಡಿ.2ರ ಶನಿವಾರ ಸಂಜೆ 6:00 ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.
ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ಡಿ.2ರಿಂದ 16ರವರೆಗೆ ರಾಜಾಂಗಣದಲ್ಲಿ ಹಾಗೂ ಡಿ.17ರಿಂದ 24ರವರೆಗೆ ಬ್ರಹ್ಮಾವರದಲ್ಲಿ ಒಟ್ಟು 42 ಪ್ರೌಢಶಾಲೆಗಳ 43 ಪ್ರದರ್ಶನ ನಡೆಯಲಿವೆ. ನಾಳೆ ಸಭಾ ಕಾರ್ಯಕ್ರಮದ ಬಳಿಕ ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ಶ್ವೇತಕುಮಾರ ಚರಿತೆ’ ಯಕ್ಷಗಾನ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.