2019ರಲ್ಲಿ ಅಧಿಕಾರ ತೊರೆಯಲಿರುವ ಜಪಾನ್ ಚಕ್ರವರ್ತಿ

Update: 2017-12-01 16:42 GMT

ಟೋಕಿಯೊ, ಡಿ. 1: ಜಪಾನ್ ಚಕ್ರವರ್ತಿ ಅಕಿಹಿಟೊ 2019 ಎಪ್ರಿಲ್ 30ರಂದು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಅವರು ಎರಡು ಶತಮಾನಗಳ ಅವಧಿಯಲ್ಲಿ ಈ ರೀತಿಯಲ್ಲಿ ಸಿಂಹಾಸನದಿಂದ ಕೆಳಗಿಳಿಯುತ್ತಿರುವ ಮೊದಲ ಜಪಾನ್ ಚಕ್ರವರ್ತಿಯಾಗಲಿದ್ದಾರೆ.

   ಸಂಸದರು, ರಾಜ ಕುಟುಂಬಿಕರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನೊಳಗೊಂಡ ಹಾಗೂ ಪ್ರಧಾನಿ ಶಿಂಝೊ ಅಬೆ ಅಧ್ಯಕ್ಷತೆಯ 10 ಸದಸ್ಯರ ರಾಜ ವ್ಯವಹಾರಗಳ ಮಂಡಳಿ (ಇಂಪೀರಿಯಲ್ ಹೌಸ್‌ಹೋಲ್ಡ್ ಕೌನ್ಸಿಲ್)ಯು ಈ ಹೊತ್ತುಗಾರಿಕೆಗೆ ಶುಕ್ರವಾರ ಒಪ್ಪಿಗೆ ನೀಡಿದೆ.

83 ವರ್ಷದ ಚಕ್ರವರ್ತಿಯ ಉತ್ತರಾಧಿಕಾರಿಯಾಗಿ 57 ವರ್ಷದ ಯುವರಾಜ ನರುಹಿಟೊ ಪಟ್ಟಕ್ಕೆ ಏರಲಿದ್ದಾರೆ.

1989 ಜನವರಿ 8ರಂದು ಸಿಂಹಾಸನವೇರಿದ ಅವರು 28 ವರ್ಷಗಳ ಕಾಲ ಜಪಾನ್ ಚಕ್ರವರ್ತಿಯಾಗಿ ತನ್ನ ಕರ್ತವ್ಯಗಳನ್ನು ನಿಭಾಯಿಸಿದ್ದಾರೆ.

ಅವರು ಈಗಾಗಲೇ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಹಾಗೂ ವೃಷಣ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News