ಡಿ.4: ದೇರಳಕಟ್ಟೆಗೆ ಸಿರಾಜುದ್ದೀನ್ ಖಾಸಿಮಿ
ಮಂಗಳೂರು, ಡಿ.1: ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ವತಿಯಿಂದ ಮದ್‌ಹುರ್ರಸೂಲ್ ಕಾರ್ಯಕ್ರಮದ ಅಂಗವಾಗಿ ಡಿ.4ರಂದು ಮಗ್ರಿಬ್ ನಮಾಜ್ ಬಳಿಕ ದೇರಳಕಟ್ಟೆಯ ಗ್ರೀನ್ ಗ್ರೌಂಡಿನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಯುವ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಅವರಿಂದ ಮತ ಪ್ರಭಾಷಣೆ ನಡೆಯಲಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಅಧ್ಯಕ್ಷ ಇಬ್ರಾಹಿಂ ಕೊಣಾಜೆ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳನಗರ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ಅಧ್ಯಕ್ಷ ಸೈಯದ್ ಅಮೀರ್ ತಂಳ್ ಕಿನ್ಯಾ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಿ. ಇಸ್ಮಾಯಿಲ್ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಡಿ.ಅಬ್ಬಾಸ್ ಹಾಜಿ, ಸಚಿವ ಯು.ಟಿ.ಖಾದರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಫಾರೂಕ್ ಹಾಜಿ ಕಲ್ಲಡ್ಕ, ಶಾಖಾ ಅಧ್ಯಕ್ಷ ನೌಫಾಲ್ ಬಿ., ಕಾರ್ಯದರ್ಶಿ ಮುನ್ಸಿದ್, ಕ್ಲಸ್ಟರ್ ಕಾರ್ಯದರ್ಶಿ ನೌಶಾದ್ ಉಪಸ್ಥಿತರಿದ್ದರು.