ಡಿ.7ರಿಂದ ‘ಅಭಿವೃದ್ಧಿಗಾಗಿ ಜನತೆಯೆಡೆಗೆ ನಮ್ಮ ನಡಿಗೆ’
Update: 2017-12-01 23:17 IST
ಮಂಗಳೂರು, ಡಿ.1: ‘ಸೌಹಾರ್ದತೆಯಿಂದ ಅಭಿವೃದ್ಧಿಯೆಡೆಗೆ’ ಎಂಬ ಘೋಷಣೆಯೊಂದಿಗೆ ಮಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಜನತೆಯೆಡೆಗೆ ನಮ್ಮ ನಡಿಗೆ ಎಂಬ ಪಾದಯಾತ್ರೆಯು ಡಿ.7ರಿಂದ 10ರವರೆಗೆ 4 ದಿನಗಳ ಕಾಲ ಮಂಗಳೂರು ನಗರ ದಕ್ಷಿಣ ಕ್ಷೇತ್ರದಾದ್ಯಂತ ಜರಗಲಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ಡಿ.7ರಂದು ಬೆಳಗ್ಗೆ 9:30ಕ್ಕೆ ಮನಪಾ ಕಚೇರಿ ಮುಂದೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಡಿ.10ರಂದು ಸಂಜೆ 4ಕ್ಕೆ ಯೆಯ್ಯೆಡಿಗೆ ಪಾದಯಾತ್ರೆ ತಲುಪಲಿದ್ದು, ಅಲ್ಲಿ ಸ್ವಾಗತ ಕೋರುವ ಮೂಲಕ ಶಕ್ತಿನಗರದಲ್ಲಿ ಸಮಾರೋಪಗೊಳ್ಳಲಿದೆ. ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.