ಜಿಂಬಾಬ್ವೆ: ಸಂಪುಟಕ್ಕೆ ಹಿರಿಯ ಸೇನಾಧಿಕಾರಿಗಳನ್ನು ನೇಮಿಸಿದ ಮನಂಗಾಗ್ವ

Update: 2017-12-01 18:02 GMT

ಹರಾರೆ (ಜಿಂಬಾಬ್ವೆ), ಡಿ. 1: ಜಿಂಬಾಬ್ವೆಯ ನೂತನ ಅಧ್ಯಕ್ಷ ಎಮರ್‌ಸನ್ ಮನಂಗಾಗ್ವ ತನ್ನ ನೂತನ ಸಚಿವ ಸಂಪುಟದ ಉನ್ನತ ಹುದ್ದೆಗಳಿಗೆ ಹಿರಿಯ ಸೇನಾಧಿಕಾರಿಗಳನ್ನು ನೇಮಿಸಿದ್ದಾರೆ.

ಸೇನೆಯ ಒತ್ತಡದಿಂದಾಗಿ 93 ವರ್ಷದ ಅಧ್ಯಕ್ಷ ರಾಬರ್ಟ್ ಮುಗಾಬೆ ರಾಜೀನಾಮೆ ನೀಡಿದ ಬಳಿಕ, ಕಳೆದ ವಾರ ಮನಂಗಾಗ್ವ ದೇಶದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಅವರು ಪ್ಯಾಟ್ರಿಕ್ ಚಿನಮಸ ಅವರನ್ನು ಹಣಕಾಸು ಸಚಿವರಾಗಿ, ಏರ್ ಮಾರ್ಶಲ್ ಪೆರನ್ಸ್ ಶಿರಿ ಅವರನ್ನು ಭೂ ಸಚಿವರಾಗಿ ಮತ್ತು ಮೇಜರ್ ಜನರಲ್ ಸಿಬುಸಿಸೊ ಮೊಯೊ ಅವರನ್ನು ವಿದೇಶ ಸಚಿವರಾಗಿ ನೇಮಿಸಿದ್ದಾರೆ.

ಅದೇ ವೇಳೆ, ಅವರು ರಾಬರ್ಟ್ ಮುಗಾಬೆ ಸಂಪುಟದಲ್ಲಿದ್ದ ಹಲವರನ್ನು ತನ್ನ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಭೂತಕಾಲದಿಂದ ಮುಕ್ತಿ ಮತ್ತು ವ್ಯಾಪಕ ತಳಹದಿಯ ಸರಕಾರವನ್ನು ನಿರೀಕ್ಷಿಸಿದ್ದ ಜನರು ಇದರಿಂದ ಅತೃಪ್ತಗೊಳ್ಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News