×
Ad

ಐತಿಹಾಸಿಕ ಕೆರೆಗಳಿಗೆ ಕಾಯಕಲ್ಪ: ಜೆ.ಆರ್.ಲೋಬೊ

Update: 2017-12-02 17:43 IST

ಮಂಗಳೂರು, ಡಿ.2 ನಗರದ ಆಧುನೀಕರಣತೆಗೆ ಹೊಸತನವನ್ನು ನೀಡುವ ಸಲುವಾಗಿ ಕೆರೆಗಳಿಗೆ ಕಾಯಕಲ್ಪನೀಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.

 ಜಪ್ಪಿನಮೊಗರು ಕೋರ್ದಬ್ಬು ದೈವಸ್ಥಾನದ ಎರಡು ಕೆರೆಗಳನ್ನು 50 ಲಕ್ಷ ರೂ.ವೆಚ್ಚದಲ್ಲಿ ಸಣ್ಣ ನೀರಾವರಿ ಯೋಜನೆಯ ಮೂಲಕ ಅಭಿವೃದ್ಧಿಗೊಳಿಸಲಾಗಿದೆ. ಬೈರಾಡಿಕೆರೆ, ಗುಜ್ಜರಕೆರೆ, ಬಜಾಲ್ ಶಾಂತಿ ನಗರದಲ್ಲಿರುವ ಕಂಬಳ ಕೆರೆ, ಕೆಂಬಾರ್ ಪ್ರಶಾಂತ ಬಾಗ್‌ನಲ್ಲಿರುವ ಕೆರೆ, ನಿಡ್ಡೇಲ್ ಭಟ್ರಕಟ್ಟ ಬಳಿ ಶಾಶ್ವತ ವಡ್ಡು ನಿರ್ಮಾಣ, ಕದ್ರಿ ಜೋಗಿ ಮಠದ ಬಳಿಯಿರುವ ಕೆರೆ, ಕದ್ರಿ ಕೈಬಟ್ಟಲಿನ ಡಾಕ್ಟರ್ಸ್ ಕಾಲನಿ ಕೆರೆ, ಪಿಲಿಕುಳದಲ್ಲಿ ಎರಡು ಕೆರೆಗಳು ಪುನರುಜ್ಜೀವನಗೊಳ್ಳಲಿದೆ ಎಂದು ಹೇಳಿದರು.

ಒಂದು ಕಾಲದಲ್ಲಿ ಈ ಕೆರೆಗಳು ದನ ಕರುಗಳಿಗೆ ನೀರಿನ ಕೊರತೆ ನೀಗಿಸುತ್ತಿತ್ತು. ಜನರು ಬಟ್ಟೆ ತೊಳೆಯುವುದು, ನಿತ್ಯ ಉಪಯೋಗಕ್ಕೆ ಇದರ ನೀರನ್ನೇ ಬಳಸುತ್ತಿದ್ದರು. ಇದರೊಂದಿಗೆ ಈ ಕೆರೆಗಳೇ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರವಾಗಿದ್ದವು. ಕೆಲವು ಕೆರೆಗಳು ದೇವರಿಗೆ ಪವಿತ್ರ ಜಲ ಒದಗಿಸುತ್ತಿದ್ದವು. ಆದರೆ ಕಾಲ ಕಳೆದಂತೆ ಆಧುನೀಕತೆ ಹೆಚ್ಚಿದಂತೆ ಈ ಕೆರೆಗಳು ತಮ್ಮ ರೂಪಕಳೆದುಕೊಂಡು ಕೊಳಚೆ ನೀರಾಗಿ, ನಿರುಪಯುಕ್ತ ಕೇಂದ್ರಗಳಾಗಿ, ತ್ಯಾಜ್ಯ ವಸ್ತುಗಳನ್ನು ತುಂಬಿಸುವ ಘಟಕಗಳಾಗಿ ಪರಿವರ್ತನೆಯಾದವು. ಇಂಥ ನಿರುಪಯುಕ್ತ ಕೆರೆಗಳನ್ನು ಮತ್ತೆ ಹೊಸರೂಪಕ್ಕೆ ತರುವುದೇ ತನ್ನ ಕಸನಾಗಿದೆ. ಅದಕ್ಕಾಗಿ ನಗರದ 10 ಕೆರೆಗಳನ್ನು ಗುರುತಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಜನರಿಗೆ ಕುಡಿಯುವ ನೀರು ಒದಗಿಸುವುದು ಮತ್ತು ಅಂತರ್ಜಲವನ್ನು ಹೆಚ್ಚಿಸಿ ಅಗತ್ಯವಿದ್ದಾಗ ಜಾನುವಾರುಗಳಿಗೆ, ಜನರಿಗೆ ಕುಡಿಯಲು ಅನುಕೂಲವಾಗುವಂತೆ ಮಾಡಲಾಗುವುದು. ಕೆರೆಗಳ ಹೂಳು ತೆಗೆದು, ತಡೆಗೋಡೆಗಳನ್ನು ನಿರ್ಮಾಣ ಮಾಡಿ ಜನರು ನಿರಾತಂಕಾವಾಗಿ ಈ ನೀರನ್ನು ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡುವುದು ಮೂಲ ಉದ್ದೇಶವಾಗಿದೆ ಎಂದು ಜೆ.ಆರ್.ಲೋಬೊ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News