ಕೋಟ ಪಡುಕರೆಯಲ್ಲಿ ಸಂಭ್ರಮದ ಮೀಲಾದುನ್ನಬಿ
Update: 2017-12-02 17:55 IST
ಕೋಟ ಪಡುಕರೆ, ಡಿ. 2: ಇಲ್ಲಿನ ರಿಫಾಯೀ ಮಸ್ಜಿದ್ ಹಾಗೂ ಹಿದಾಯತುಲ್ ಇಸ್ಲಾಮ್ ಅರಬಿಕ್ ಮದ್ರಸ ವತಿಯಿಂದ ಪ್ರವಾದಿ ಮುಹಮ್ಮದ್( ಸ.ಅ) ರ ಜನ್ಮದಿನಾಚರಣೆ ಹಾಗೂ ಮೀಲಾದ್ ಸಂದೇಶ ಜಾಥಾ ಕಾರ್ಯಕ್ರಮ ನಡೆಯಿತು.
ಆ ಪ್ರಯುಕ್ತ ನಡೆದ ಸ್ವಲಾತ್ ವಾರ್ಷಿಕ ಕಾರ್ಯಕ್ರಮಕ್ಕೆ ಸೈಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ನೇತೃತ್ವ ನೀಡಿದರು. ಸಭೆಯಲ್ಲಿ ಹತ್ತು ವರ್ಷಗಳಿಂದ ಖತೀಬರಾಗಿ ಸೇವೆಸಲ್ಲಿಸುತ್ತಿರುವ ಸಿದ್ದೀಖ್ ಸಖಾಫಿ ಅವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಕೆ.ಎಚ್. ಹುಸೈನ್ ಸ್ವಾಗತಿಸಿದರು. ಮದ್ರಸ ಅಧ್ಯಾಪಕರಾದ ಶರೀಫ್ ಸಅದಿ ಮತ್ತು ಶಾಫೀ ಝುಹ್ರೀ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.