ಎಚ್‌ಐವಿ ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ: ಡಾ.ವೈ.ಎಸ್.ರಾವ್
ಉಡುಪಿ, ಡಿ.2: ಎಚ್‌ಐವಿ ಹರಡುವ ಬಗ್ಗೆ ಹಾಗೂ ಅದರ ಪರಿಣಾಮಗಳ ಬಗ್ಗೆ ನರ್ಸಿಂಗ್ ವಿದ್ಯಾರ್ಥಿಗಳು ಸಮಾಜದಲ್ಲಿ ಅರಿವು ಮತ್ತು ರೋಗಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಐಎಂಎ ಅಧ್ಯಕ್ಷ ಡಾ.ವೈ.ಎಸ್.ರಾವ್ ತಿಳಿಸಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ ಶನಿವಾರ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಧನ್ವಂತರಿ ಕಾಲೇಜ್ ಆಪ್ ನರ್ಸಿಂಗ್ ಮತ್ತು ವಿದ್ಯಾ ರತ್ನ ಕಾಲೇಜ್ ಆಪ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕ್ವಿಜ್ ಸ್ಪರ್ಧೆ ಮತ್ತು ಏಡ್ಸ್ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತನಾಡುತಿ ದ್ದರು.
ಎಚ್‌ಐವಿ ಹರಡುವ ಬಗ್ಗೆ ಮತ್ತು ಏಡ್ಸ್ ಬಗ್ಗೆ ಅರಿವಿಲ್ಲದೆ ಇದುವರೆಗೆ ಈ ರೋಗಕ್ಕೆ ಅನೇಕ ಮಂದಿ ಬಲಿಯಾಗಿದ್ದಾರೆ. ಅಸುರಕ್ಷಿತ ಲೈಂಗಿಕ ಸಂಪರ್ಕ, ತಾಯಿಯಿಂದ ಗರ್ದಲ್ಲಿರುವ ಮಗುವಿಗೆ, ಏಡ್ಸ್ ರೋಗಿಯ ರಕ್ತ ಪಡೆಯು ವುದರಿಂದ ಈ ರೋಗ ಹರಡುತ್ತದೆ. ಏಡ್ಸ್ ರೋಗಿಯನ್ನು ಮುಟ್ಟುವುದರಿಂದ, ಚಿಕಿತ್ಸೆ ನೀಡುವುದರಿಂದ ರೋಗ ಹರಡುವುದಿಲ್ಲ. ನರ್ಸಿಂಗ್ ವಿದ್ಯಾರ್ಥಿಗಳು, ಏಡ್ಸ್ ರೋಗ ಹರಡುವ, ರೋಗ ಬಾರದಂತೆ ತಡೆಯುವ ಹಾಗೂ ರೋಗಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಅಧ್ಯಕ್ಷತೆಯನ್ನು ಉಡುಪಿ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಉಮೇಶ್ ಪ್ರಭು ವಹಿಸಿದ್ದರು. ರೆಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ಡಾ.ರಾಮಚಂದ್ರ ಕಾಮತ್ ನರ್ಸಿಂಗ್ ವಿದ್ಯಾಥಿಗಳಿಗೆ ಕ್ವಿಜ್ ನಡೆಸಿಕೊಟ್ಟರು. ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್ ಸ್ವಾಗತಿಸಿದರು. ಜೂನಿಯರ್ ರೆಡ್‌ಕ್ರಾಸ್ ಕಮಿಟಿಯ ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.