ಬಜಾಲ್ ನಂತೂರು: ಮೀಲಾದುನ್ನೆಬಿ
ಮಂಗಳೂರು, ಡಿ.2: ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸದ ವತಿಯಿಂದ ಪ್ರವಾದಿ ಮುಹಮ್ಮದ್ (ಸ)ರ 1492ನೆ ಜನ್ಮದಿನದ ಅಂಗವಾಗಿ ಮೀಲಾದುನ್ನೆಬಿ ಆಚರಿಸಲಾಯಿತು.
ಜಮಾಅತ್ ಅಧ್ಯಕ್ಷ ಬಿ.ಎನ್ ಅಬ್ಬಾಸ್ ಹಾಜಿ ಧ್ವಜಾರೋಹಣಗೈದರು. ಮಸೀದಿಯ ಇಮಾಮ್ ಇಲ್ಯಾಸ್ ಅಮ್ಜದಿ ದುಆಗೈದರು. ರ್ಯಾಲಿಗೆ ಬದ್ರಿಯಾ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ನಝೀರ್ ಬಜಾಲ್ ನೇತೃತ್ವ ವಹಿಸಿದ್ದರು.
ಸ್ವಲಾತ್, ತಕ್ಬೀರ್ ಧ್ವನಿಗಳ ಮೂಲಕ ಸಾಗಿದ ರ್ಯಾಲಿಯಲ್ಲಿ ಮದ್ರಸ ಅಧ್ಯಾಪಕರು, ಆಡಳಿತ ಸಮಿತಿ ಸದಸ್ಯರು, ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದಫ್, ಕೋಲಾಟ, ತಾಲೀಮು, ಪಥಸಂಚಲನ ನಡೆಯಿತು. ಕಾರ್ಪೊರೇಟರ್ ಅಬ್ದುಲ್ ರವೂಫ್, ಮಾಜಿ ಪಂಚಾಯತ್ ಸದಸ್ಯ ಬಿ.ಫಕ್ರುದ್ಧೀನ್, ಹಾಜಿ ಅಬ್ದುಲ್ ರಹಿಮಾನ್, ಅಬ್ದುಲ್ ಸಲಾಮ್, ಎಸ್. ಮುಹಮ್ಮದ್, ಹಾಜಿ ಎಚ್.ಎಸ್. ಹನೀಫ್, ಹಸನಬ್ಬ ಮೋನು, ಅಶ್ರಫ್ ತೋಟ, ಮುಹಮ್ಮದ್ ಹನೀಫ್ ಬೈಕಂಪಾಡಿ, ಸಂಶುದ್ಧೀನ್, ಇಕ್ಬಾಲ್ ಅಹ್ಸ್‌ನಿ, ಅಶ್ರಫ್ ಕೆ.ಇ., ಟಿ.ಎಫ್. ಅಬ್ದುಲ್ಲ, ಅಬ್ದುಲ್ ಹಮೀದ್ ವೈ., ಅಶ್ರಫ್ ಸಅದಿ, ಅಬ್ದುಲ್ ರಹಿಮಾನ್ ಮದನಿ, ಅಬೂಬಕರ್ ಸಖಾಫಿ, ಶರೀಫ್ ಮುಸ್ಲಿಯಾರ್, ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಹಮ್ಮದ್ ಖುರೇಶ್, ಎಚ್.ಎಸ್ ಮುನೀರ್ ಉಪಸ್ಥಿತರಿದ್ದರು. ಸದರ್ ಮುಅಲ್ಲಿಂ ಅಬೂಬಕರ್ ಮುಸ್ಲಿಯಾರ್ ಸ್ವಾಗತಿಸಿದರು. ಹಕೀಂ ಮದನಿ ವಂದಿಸಿದರು.