ಮಹಿಳೆ ನಾಪತ್ತೆ
Update: 2017-12-02 18:20 IST
ಉಳ್ಳಾಲ, ಡಿ. 2: ಕ್ಯಾಂಪ್‌ಗೆಂದು ತೆರಳಿದ ಮಹಿಳೆಯೊಬ್ಬರು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೆರ್ಮನ್ನೂರು ಚೆಂಬುಗುಡ್ಡೆ ಕೆರೆಬೈಲ್‌ಗುಡ್ಡೆ ನಿವಾಸಿ ಕಾಶೀನಾಥ ಅವರ ಪತ್ನಿ ಪುಷ್ಪಾ (36) ನಾಪತ್ತೆಯಾದ ಮಹಿಳೆ.
ಶುಕ್ರವಾರ ಬೆಳಗ್ಗೆ ಮನೆ ಕೆಲಸ ಮುಗಿಸಿ, ಸ್ಥಳೀಯ ಸಂಘದ ಕ್ಯಾಂಪಿಗೆ ಹೋಗಿ ಬರುತ್ತೇನೆಂದು ತೆರಳಿ ಹೊರಟವರು ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾದ ಕುರಿತಾಗಿ ದೂರು ದಾಖಲಿಸಿದ್ದಾರೆ.
ಪುಷ್ಪಾ 5ಅಡಿ ಎತ್ತರವಿದ್ದು ತೆಳ್ಳಗಿನ ದೇಹ, ಬಿಳಿ ಮೈ ಬಣ್ಣ, ಕೋಲು ಮುಖದವರಾಗಿದ್ದು ಮನೆಯಿಂದ ಹೊರಡುವಾಗ ಗಿಳಿ ಹಸಿರು ಬಣ್ಣದ ಗೆರೆಗಳಿರುವ ಚೂಡಿದಾರ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಹಾಗೂ ತೆಲುಗು ಭಾಷೆ ಬಲ್ಲವರಾಗಿದ್ದು ಮೂಗಿನಲ್ಲಿ ಹಳೆಯ ಗಾಯದ ಗುರುತು ಇದ್ದು ಯಾರಾದರೂ ಗುರುತಿಸಿದರೆ ತಕ್ಷಣ ಉಳ್ಳಾಲ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.