×
Ad

ಎಸ್ಎಸ್ಎಫ್ ಅಳೇಕಲ ಶಾಖೆ ವತಿಯಿಂದ ಪ್ರತಿಭೋತ್ಸವ ಕಾರ್ಯಕ್ರಮ

Update: 2017-12-02 18:35 IST

ಅಳೇಕಲ, ಡಿ. 2: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಎಸ್ಎಫ್ ಅಳೇಕಲ ಶಾಖೆ ವತಿಯಿಂದ ರಾಜ್ಯ ಸಮಿತಿಯ ನಿರ್ದೇಶನದಂತೆ ಪ್ರತಿಭೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಅಳೇಕಲದ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಜ್ಯೂನಿಯರ್, ಸೀನಿಯರ್, ಜನರಲ್ ವಿಭಾಗಗಳು ಸೇರಿದಂತೆ 180 ವಿದ್ಯಾರ್ಥಿಗಳು ಸ್ಫರ್ದೆಯಲ್ಲಿ ಭಾಗವಹಿಸಿದ್ದರು. ಪ್ರತಿಭೋತ್ಸವ ಸಮಿತಿ ಕನ್ವೀನರ್ ಮುಹಮ್ಮದ್ ಹಂಝ ಉಸ್ತುವಾರಿಯಲ್ಲಿ ಸ್ಪರ್ದೆ ನಡೆಯಿತು.

ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಅಳೇಕಲ ಅಲ್- ಅಮೀನ್ ಜುಮಾ ಮಸೀದಿ ಖತೀಬರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್ ದುಆ ಮೂಲಕ ಚಾಲನೆ ನೀಡಿದರು. ಶಾಖಾಧ್ಯಕ್ಷ ಶಂಸುದ್ದೀನ್ ಅಳೇಕಲ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಅಳೇಕಲ ಜುಮಾ ಮಸೀದಿ ಅಧ್ಯಕ್ಷ ಹಾಜಿ ಯು.ಎಸ್ ಹಂಝರವರು ಉದ್ಘಾಟಿಸಿದರು.

ಸೈಯದ್ ಮದನಿ ಮೊಹಲ್ಲಾ ಓಕ್ಕೂಟ  ಅಧ್ಯಕ್ಷ ಶಿಹಾಬ್ ಸಖಾಫಿ ಉಸ್ತಾದರು ಮುಖ್ಯ ಪ್ರಭಾಷಣಗೈದರು. ಎಸ್ಎಸ್ಎಫ್ ತೊಕ್ಕೋಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಳೇಕಲ ಜುಮಾ ಮಸೀದಿ ಪ್ರ.ಕಾರ್ಯದರ್ಶಿ ಅಶ್ರಫ್ ಯು.ಡಿ, ಕೋಶಾಧಿಕಾರಿ ಇಬ್ರಾಹಿಮ್ ಸಿ.ಎಮ್, ತೊಕ್ಕೋಟು ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸಲಾತ್ ನಗರ, ಮಾರ್ಗತಲೆ ಶಾಖಾಧ್ಯಕ್ಷ ಸೈಫಾನ್ ಮುಖ್ಯ ಅತಿಥಿಗಳಾಗಿ ಆಗಮಿಸಿದರು.

ಈ ಸಂದರ್ಭ ಸ್ಪರ್ಧೆಯ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳನ್ನು ನೀಡಿ ಗೌರವಿಸಲಾಯಿತು. ಜ್ಯೂನಿಯರ್ ವಿಭಾಗದಲ್ಲಿ  ಸೈಯದ್ ಜವಾಹಿರ್ ತಂಙಳ್ ಹಾಗೂ ಸೀನಿಯರ್ ವಿಭಾಗದಲ್ಲಿ ಅರ್ಮಾನ್ ಮುಹಮ್ಮದ್ ಚಾಂಪಿಯನ್ ಶಿಪ್ ಪಡೆದರು.

ಕಾರ್ಯಕ್ರಮದಲ್ಲಿ ಆಶಿಖ್ ಅಳೇಕಲ, ನಾಫಿ ಸಾಧುಹಿತ್ಲು, ಎಸ್ ಬಿ ಎಸ್ ಕನ್ವೀನರ್ ಶಫೀಖ್ ಅಳೇಕಲ, ಶಾಕಿರ್, ಮುಜೀಬ್ ಪಾಂಡೆಲ್, ರಾಹಿಶ್ ಸೇರಿ ದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತಿಭೋತ್ಸವ ಕನ್ವೀನರ್ ಮುಹಮ್ಮದ್ ಹಂಝ ಸ್ವಾಗತಿಸಿದರು. ಶಾಖಾ ಪ್ರ. ಕಾರ್ಯದರ್ಶಿ ಆರಿಫ್ ಅಳೇಕಲ ನಿರೂಪಿಸಿದರು. ಶಾಖಾ ಉಪಾಧ್ಯಕ್ಷ ಫಾಝಿಲ್ ಅಳೇಕಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News