ಡಿ. 5: ಡಿಸಿ ಕಚೇರಿಯಲ್ಲಿ ಸ್ವಚ್ಛ ಕ್ವಿಜ್
ಉಡುಪಿ, ಡಿ.2: ಜಿಲ್ಲಾಡಳಿತ ಮತ್ತು ನಗರಸ್ಥಳೀಯ ಸಂಸ್ಥೆಗಳ ವತಿಯಿಂದ ಉಡುಪಿ ಜಿಲ್ಲೆಯ 8ನೇ ತರಗತಿಯಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸ್ವಚ್ಛಕ್ವಿಜ್-2017 ಸ್ವರ್ಧೆಯನ್ನು ಡಿ.5ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಗಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಒಂದು ಶಾಲೆಯಿಂದ 8ರಿಂದ 12ನೆ ತರಗತಿಯ ತಲಾ ಇಬ್ಬರು ವಿದ್ಯಾರ್ಥಿ ಗಳ 5ತಂಡದಂತೆ ಒಟ್ಟು 10 ಮಂದಿ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿಜೇತ ತಂಡಕ್ಕೆ ಪ್ರಥಮ ಬಹುಮಾನ 10,000, ದ್ವಿತೀಯ ಬಹುಮಾನ 6000, ತೃತೀಯ ಬಹುಮಾನ ರೂ.4000 ನೀಡಲಾಗುವುದು. ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.
ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ನಡೆಯುವ ಈ ಸ್ವಚ್ಛ ಕ್ವಿಜ್ -2017 ಸ್ವರ್ಧೆಯಲ್ಲಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಡುಪಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರ ಪ್ರಕಟನೆ ತಿಳಿಸಿದೆ.