ತಂಬಾಕು ಅಂಗಡಿಗಳಿಗೆ ದಾಳಿ
Update: 2017-12-02 18:52 IST
ಉಡುಪಿ, ಡಿ.2: ಜಿಲ್ಲೆಯಲ್ಲಿ ಕೋಟ್ಪಾ-2003 ಕಾಯ್ದೆಯನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳ, ತಾಲೂಕಿನ ಸಾಸ್ತಾನದ ವಿವಿಧ ತಂಬಾಕು ಮಾರಾಟದ ಅಂಗಡಿ, ಹೊಟೇಲ್‌ಗಳು ಮತ್ತು ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ 16 ಪ್ರಕರಣ ದಾಖಲಿಸಿ ರೂ. 2,100 ದಂಡ ವಸೂಲಿ ಮಾಡಲಾಗಿದೆ.
ಈ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ವಾಸುದೇವ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೃಷ್ಣಪ್ಪ, ಕಾರ್ಮಿಕ ಇಲಾಖೆಯ ಅಧಿಕಾರಿ ಜೀವನ್, ಕೋಟ ಪೋಲೀಸ್ ಠಾಣೆಯ ಆರಕ್ಷಕಿ ಸುಧಾ, ರಾಷ್ಟೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ ಜಿಲ್ಲಾ ಸಲಹೆಗಾರರಾದ ಮಮತಾ ನಾಯಕ್, ಎನ್‌ಟಿಸಿಪಿ ಸಮಾಜ ಕಾರ್ಯಕರ್ತೆ ಶೈಲಾ ಎಸ್. ಎಂ., ಉಪಸ್ಥಿತರಿದ್ದರು.