×
Ad

ಡಿ. 3ರಿಂದ ಗಂಟಾಲ್ ಕಟ್ಟೆ ಮಸೀದಿಯಲ್ಲಿ ಕಥಾ ಪ್ರಸಂಗ

Update: 2017-12-02 19:03 IST

ಮಂಗಳೂರು, ಡಿ.2: ಗಂಟಾಲ್ ಕಟ್ಟೆ ಬದ್ರಿಯಾ ಜುಮಾ ಮಸ್ಜಿದ್ ಮತ್ತು ನೀರಳಿಕೆ ಖಿಳ್ ರಿಯ್ಯಾ ಮಸ್ಜಿದ್ ಆಶ್ರಯದಲ್ಲಿ ಡಿ. 3ರಿಂದ ನಾಲ್ಕು ದಿನಗಳ ಕಾಲ ಇಸ್ಲಾಮಿಕ್ ಕಥಾ ಪ್ರಸಂಗ , ವಾರ್ಷಿಕ ಸ್ವಲಾತ್ ಮತ್ತು ಮಕ್ಕಳ ಪ್ರತಿಭಾ ಕಾರ್ಯಕ್ರಮ ನಡೆಯಲಿದೆ. ರವಿವಾರ ಸಂಜೆ 7 ಗಂಟೆಗೆ ಮಸೀದಿ ವಠಾರದಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು ಬುಧವಾರದವರೆಗೆ ಕಾರ್ಯಕ್ರಮ ನಡೆಯಲಿದೆ.

ಗಂಟಾಲ್ ಕಟ್ಟೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ಫಾಝಿಲ್ ಹನೀಫಿ ಬುಡೋಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗಂಟಾಲ್ ಕಟ್ಟೆ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಬಾನಿಲು ಅಧ್ಯಕ್ಷತೆ ವಹಿಸಲಿದ್ದಾರೆ. ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ವಾರ್ಷಿಕ ಸ್ವಲಾತ್ ಹಾಗೂ ದುವಾ ಆಶೀರ್ವಚನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಸೀದಿಯ ಸದರ್ ರಫೀಕ್ ದಾರಿಮಿ ಸ್ವಾಗತಿಸಲಿದ್ದಾರೆ. ಪುತ್ತೂರು ಎಂ.ಎಚ್.ಆರ್ ಹಂಝ ಮುಸ್ಲಿಯಾರ್ ರಿಂದ ಕಥಾ ಪ್ರಸಂಗ, ಕೇರಳದ ಹಬೀಬ್ ರಹ್ಮಾನ್ ರಿಂದ ಇಸ್ಲಾಮಿಕ್ ಗಾಯನ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಈದ್ ಮೀಲಾದ್ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News