×
Ad

ಡೇವಿಡ್ ಫ್ರಾಂಕ್ ಫೆರ್ನಾಂಡಿಸ್‌ಗೆ ಡಾಕ್ಟರೇಟ್‌

Update: 2017-12-02 20:10 IST

ಮಂಗಳೂರು, ಡಿ. 2: ‘ತುಳುನಾಡೋಚ್ಚಯ - 2017’ರ ಅಧ್ಯಕ್ಷ ಹಾಗೂ ಮಸಾಕೋ ಶಿಪ್ಪಿಂಗ್ ಸಿ.ಇ.ಒ. ಆಗಿರುವ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವರಿಗೆ ಇಂಟರ್‌ನೇಶನಲ್ ಓಪನ್ ಯುನಿರ್ವಸಿಟಿ ಫಾರ್ ಹೆಲ್ತ್ ಸೈನ್ಸ್ ಆ್ಯಂಡ್ ಪೀಸ್ ಯು.ಎಸ್.ಎ. ಸಂಸ್ಥೆಯು ಡಿ.15ರಂದು ಕೊಳಲಾಂಪುರದಲ್ಲಿ ನಡೆಯಲಿರುವ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಿದೆ.

ಅವರಿಗೆ ಕೆನಡಿಯನ್ ವಿಶನರಿ ಅವಾರ್ಡ್, ಕೊಂಕಣಿ ಕಲಾರತ್ನ ಅವಾರ್ಡ್, ವಿಶ್ವ ತುಳುವೆರೆ ಆಯನೋ ಪ್ರಶಸ್ತಿ, ಉಡುಪಿ ಅಷ್ಟಮಠ, ಮೂಡುಬಿದಿರೆ ಜೈನಬಸದಿ ಮತ್ತು ಚರ್ಚ್, ಮಸೀದಿಗಳಿಂದ ಪುರಸ್ಕಾರಗಳು ಲಭಿಸಿವೆ.

ತುಳು, ಕೊಂಕಣಿ, ಕನ್ನಡ ಮೊದಲಾದ ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸಿರುವ ಇವರಿಗೆ ತುಳು ಭಾಷೆ, ಸಂಸ್ಕೃತಿ ಎಂದರೆ ಅಪಾರ ಪ್ರೀತಿ. ಈ ಕಾರಣಕ್ಕಾಗಿಯೇ ಅವರಿಗೆ ಬೆಂಗಳೂರಿನಲ್ಲಿ ಡಿ.10ರಂದು ಸರ್ವೊತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ತುಳುನಾಡ ಬೊಳ್ಳಿ ಪ್ರಶಸ್ತಿ ನೀಡಿ ಗೌರಸಲು ಬೆಂಗಳೂರಿನ ಸೃಷ್ಟಿ ಕಲಾಭೂಮಿ ತೀರ್ಮಾನಿಸಿದೆ ಎಂದು ಪ್ರಕಟನೆ ತಿಳಿಸಿದೆ.

ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವರಿಗೆ ತುಳುನಾಡೋಚ್ಚಯ -2017 ಸಮಿತಿ ಅಭಿನಂದನೆಯನ್ನು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News