ಲಂಡನ್‌ನಲ್ಲಿ 454 ಆ್ಯಸಿಡ್ ದಾಳಿ
Update: 2017-12-02 22:43 IST
ಲಂಡನ್, ಡಿ. 2: ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಆ್ಯಸಿಡ್ ದಾಳಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕಳೆದ ವರ್ಷ ಇಲ್ಲಿ 454 ಆ್ಯಸಿಡ್ ದಾಳಿಗಳು ನಡೆದವು. 2015ರಲ್ಲಿ ಸಂಭವಿಸಿದ 261 ಮತ್ತು 2014ರಲ್ಲಿ ನಡೆದ 166 ಪ್ರಕರಣಗಳಿಗೆ ಹೋಲಿಸಿದರೆ, ಕಳೆದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಆ್ಯಸಿಡ್ ದಾಳಿ ನಡೆದಿದೆ.
ಹೆಚ್ಚುತ್ತಿರುವ ಆ್ಯಸಿಡ್ ದಾಳಿಗಳ ಹಿನ್ನೆಲೆಯಲ್ಲಿ ಜನರು ಬೀದಿಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ ಎಂದು ಲಂಡನ್‌ನ ಆ್ಯಸಿಡ್ ಸಂತ್ರಸ್ತರ ಟ್ರಸ್ಟ್‌ನ ಮುಖ್ಯಸ್ಥ ಜಾಫ್ ಶಾ ಹೇಳುತ್ತಾರೆ.
‘‘ಆ್ಯಸಿಡ್ ದಾಳಿಗಳಲ್ಲಿ ಬದುಕುಳಿದವರು ಅಸಾಧಾರಣ ಧೈರ್ಯಶಾಲಿಗಳು’’ ಎಂದು ಅವರು ಬಣ್ಣಿಸುತ್ತಾರೆ.