×
Ad

ಉಡುಪಿ ಪರ್ಬ: ಸ್ಟಾಲ್-ಮಳಿಗೆಗಳಿಗೆ ಅರ್ಜಿ ಆಹ್ವಾನ

Update: 2017-12-02 22:54 IST

ಉಡುಪಿ, ಡಿ.2: ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಡಿ.29, 30 ಹಾಗೂ 31ರಂದು ಮಲ್ಪೆ ಬೀಚ್‌ನಲ್ಲಿ ಪ್ರವಾಸೋದ್ಯಮ ಉತ್ಸವ ‘ಉಡುಪಿ ಪರ್ಬ’ವನ್ನು ಆಚರಿಸಲಾ ಗುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಮಲ್ಪೆಬೀಚ್ ವ್ಯಾಪ್ತಿಯಲ್ಲಿ 30 ತಾತ್ಕಾಲಿಕ ಸ್ಟಾಲ್ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಈ ಉತ್ಸವದಲ್ಲಿ ತಮ್ಮ ಉತ್ಪನ್ನ ಗಳನ್ನು ಮಾರಾಟ ಮಾಡಲು ಆಸಕ್ತಿ ಇರುವ ಸಂಘ-ಸಂಸ್ಥೆಗಳು, ಮಹಿಳಾ ಉದ್ದಿಮೆದಾರರು, ಆಹಾರ ಮಳಿಗೆ ಹೊಂದಲು ಇಚ್ಛೆ ಹೊಂದಿರುವವರು, ಸ್ಥಳೀಯವಾಗಿ ತಯಾರಾಗುವ ಗುಡಿ ಕೈಗಾರಿಕೆ, ಇತರೇ ಉತ್ಪನ್ನಗಳ ಮಾರಾಟ ಗಾರರು, ತಯಾರಕರು, ಟ್ರಾವೆಲ್ ಏಜೆಂಟರು ಹಾಗೂ ಇತರೇ ಮಾರಾಟ ಗಾರರು, ಉತ್ಪಾದಕರು ತಮ್ಮ ಅರ್ಜಿಯನ್ನು ಪೂರ್ಣ ವಿವರದೊಂದಿಗೆ ಡಿ.15 ರ ಒಳಗೆ ಸಹಾಯಕ ನಿರ್ದೆಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ರಜತಾದ್ರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಎ ಬ್ಲಾಕ್, 2ನೇ ಮಹಡಿ, ಮಣಿಪಾಲ, ಉಡುಪಿ-576104 ಇಲ್ಲಿಗೆ ಕಳಿಸಬೇಕು.

ಇದಕ್ಕೆ ಸಂಬಂಧಿಸಿದಂತೆ ಮಲ್ಪೆಬೀಚ್ ವ್ಯಾಪ್ತಿಯಲ್ಲಿ 30 ತಾತ್ಕಾಲಿಕ ಸ್ಟಾಲ್ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಈ ಉತ್ಸವದಲ್ಲಿ ತಮ್ಮ ಉತ್ಪನ್ನ ಗಳನ್ನು ಮಾರಾಟ ಮಾಡಲು ಆಸಕ್ತಿ ಇರುವ ಸಂಘ-ಸಂಸ್ಥೆಗಳು, ಮಹಿಳಾ ಉದ್ದಿಮೆದಾರರು, ಆಹಾರ ಮಳಿಗೆ ಹೊಂದಲು ಇಚ್ಛೆ ಹೊಂದಿರುವವರು, ಸ್ಥಳೀಯವಾಗಿ ತಯಾರಾಗುವ ಗುಡಿ ಕೈಗಾರಿಕೆ, ಇತರೇ ಉತ್ಪನ್ನಗಳ ಮಾರಾಟ ಗಾರರು, ತಯಾರಕರು, ಟ್ರಾವೆಲ್ ಏಜೆಂಟರು ಹಾಗೂ ಇತರೇ ಮಾರಾಟ ಗಾರರು, ಉತ್ಪಾದಕರು ತಮ್ಮ ಅರ್ಜಿಯನ್ನು ಪೂರ್ಣ ವಿವರದೊಂದಿಗೆ ಡಿ.15 ರ ಒಳಗೆ ಸಹಾಯಕ ನಿರ್ದೆಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ರಜತಾದ್ರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಎ ಬ್ಲಾಕ್, 2ನೇ ಮಹಡಿ, ಮಣಿಪಾಲ, ಉಡುಪಿ-576104 ಇಲ್ಲಿಗೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0820-2574868ನ್ನು ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News