ವಿರಾಟ್ ಕೊಹ್ಲಿ ದ್ವಿಶತಕ

Update: 2017-12-03 05:36 GMT

ಹೊಸದಿಲ್ಲಿ, ಡಿ.3: ಇಲ್ಲಿನ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ದಾಖಲಿಸಿದ್ದಾರೆ.

ಟೆಸ್ಟ್ ನ ಎರಡನೆ ದಿನವಾಗಿರುವ ಇಂದು ಕೊಹ್ಲಿ ಅವರು 238 ಎಸೆತಗಳಲ್ಲಿ 20 ಬೌಂಡರಿಗಳ ಸಹಾಯದಿಂದ ದ್ವಿಶತಕ ದಾಖಲಿಸಿದರು. ಇದು ಆರನೇ  ದ್ವಿಶತಕವಾಗಿದೆ. ಕಳೆದ 17 ತಿಂಗಳಲ್ಲಿ ಎಲ್ಲಾ ದ್ವಿಶತಕಗಳು ದಾಖಲೆಯಾಗಿದೆ. ಕೊಹ್ಲಿ ಈ ಸಾಧನೆ ಮಾಡಿರುವ ವಿಶ್ವದ ಮೊದಲ ನಾಯಕ.

ಮೊದಲ ದಿನದಾಟದಂತ್ಯಕ್ಕೆ ಕೊಹ್ಲಿ 156 ರನ್ ಗಳಿಸಿ ಔಟಾಗದೆ ಕ್ರೀಸ್ ನಲ್ಲಿದ್ದರು.  ಕಳೆದ ಟೆಸ್ಟ್ ನಲ್ಲೂ ಕೊಹ್ಲಿ ದ್ವಿಶತಕ (213) ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News