×
Ad

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಕಣಚೂರು ಮೋನು ಅಧಿಕಾರ ಸ್ವೀಕಾರ

Update: 2017-12-03 13:18 IST

ಮಂಗಳೂರು, ಡಿ.3: ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಹಾಜಿ ಕಣಚೂರು ಮೋನು ಅಧಿಕಾರ ಸ್ವೀಕಾರ ಕಾರ್ಯಕ್ರಮ ರವಿವಾರ ನಗರದ ಪುರಭವನದಲ್ಲಿ ನಡೆಯಿತು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಹಾಜಿ ಕಣಚೂರು ಮೋನು, ಸಮಾಜದ ಏಳಿಗೆಗಾಗಿ ಸರ್ವ ರೀತಿಯಲ್ಲಿ ಪ್ರಯತ್ನಿಸುವೆ. ಹಿರಿಯರ ಮಾರ್ಗದರ್ಶನ ಪಡೆಯುವೆ. ಮಸೀದಿ,ಮದ್ರಸ ಸಹಿತ ವಕ್ಫ್ ಸಂಸ್ಥೆಗಳ ಕೆಲಸಗಳನ್ನು ಸಕಾಲಕ್ಕೆ ಮಾಡಲು ಶ್ರಮಿಸುವೆ ಎಂದರು.

ಕಾರ್ಯಕ್ರಮದಲ್ಲಿ ಆಹಾರ ಸಚಿವ ಯು.ಟಿ.ಖಾದರ್, ಶಾಸಕ ಬಿ.ಎ.ಮೊಯ್ದಿನ್ ಬಾವಾ, ಕರ್ನಾಟ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ ಎಂ.ಬಿ.ಅಬ್ದುಲ್ ರಹ್ಮಾನ್, ಬಿ.ಎ.ಮುಹಮ್ಮದ್‌ಹನೀಫ್, ಸಮಾಜದ ಗಣ್ಯರಾದ ರಶೀದ್ ಹಾಜಿ ಉಳ್ಳಾಲ, ಹೈದರ್‌ ಪರ್ತಿಪ್ಪಾಡಿ, ಹಾಜಿ ಶಾಹುಲ್ ಹಮೀದ್, ಹಾಜಿ ಎಸ್.ಎಂ.ರಶೀದ್, ಹಾಜಿ ಹಮೀದ್ ಕಂದಕ್, ಹಾಜಿ ಇಬ್ರಾಹೀಂ ಕೋಡಿಜಾಲ್, ಎನ್.ಎಸ್.ಕರೀಂ, ಬಶೀರ್ ಬೈಕಂಪಾಡಿ, ಟಿ.ಎಸ್.ಅಬ್ದುಲ್ಲ, ಸಂಶುದ್ದೀನ್ ಸುಳ್ಯ, ಐ.ಮೊಯ್ದಿನಬ್ಬ, ಸಲಹಾ ಸಮಿತಿಯ ಉಪಾಧ್ಯಕ್ಷರಾದ ಬಾವಾ ಹಾಜಿ ನೆಕ್ಕರೆ, ಹಾಜಿ ಶಾಹುಲ್ ಹಮೀದ್ ಮೆಟ್ರೊ, ಸದಸ್ಯರಾದ ರಶೀದ್ ವಿಟ್ಲ, ಬಾಶಾ ತಂಙಳ್, ಡಿ.ಎಂ.ಅಸ್ಲಂ, ಉಮರ್ ಪಜೀರ್, ಯು.ಕೆ.ಇಸ್ಮಾಯೀಲ್ ಮೋನು, ನೂರುದ್ದೀನ್‌ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News