ಸುಳ್ಯದಲ್ಲಿ ರಸ್ತೆ ಅಪಘಾತ: ಉಳ್ಳಾಲದ ವ್ಯಕ್ತಿ ಮೃತ್ಯು
Update: 2017-12-03 13:40 IST
ಸುಳ್ಯ, ಡಿ.3: ಪಿಕಪ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿಬಿದ್ದ ಪರಿಣಾಮ ಓರ್ವ ಮೃತಪಟ್ಟು ಇನ್ನೋರ್ವ ಗಾಯಗೊಂಡ ಘಟನೆ ಕನಕಮಜಲಿನ ಪಂಜಿಗುಂಡಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮೃತರನ್ನು ಉಳ್ಳಾಲ ನಿವಾಸಿ ಕಬೀರ್(35) ಎಂದು ಗುರುತಿಸಲಾಗಿದೆ. ಪಿಕಪ್ ಚಾಲಕ ಶಫೀಕ್ ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಬೀರ್ ಅವರು ಪಿಕಪ್‌ನಲ್ಲಿ ಸೀಯಾಳ ಸಾಗಿಸುತ್ತಿದ್ದು, ಪಂಜಿಗುಂಡಿ ಸಮೀಪ ತಲುಪಿದಾಗ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ಹೊಂಡಕ್ಕೆ ಉರುಳಿಬಿದ್ದಿದೆ. ಈ ವೇಳೆ ಗಂಭೀರ ಗಾಯಗೊಂಡ ಕಬೀರ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟರೆನ್ನಲಾಗಿದೆ.