×
Ad

ಸಿಟಿ ಸೆಂಟರ್, ಬೆಂದೂರ್ ವೆಲ್ ನಲ್ಲಿ ಪೂರ್ವಿಕಾ ಮೊಬೈಲ್ಸ್ ಮಳಿಗೆಗಳ ಉದ್ಘಾಟನೆ

Update: 2017-12-03 14:44 IST

ಮಂಗಳೂರು, ಡಿ.3: ಪೂರ್ವಿಕಾ ಮೊಬೈಲ್ಸ್ ಪ್ರೈ.ಲಿ.ನ ಎರಡು ಶಾಖೆಗಳು ನಗರದ ಸಿಟಿ ಸೆಂಟರ್ ಮಾಲ್‌ನ ಮೊದಲ ಮಹಡಿ ಮತ್ತು ಬೆಂದೂರ್‌ವೆಲ್ ವೃತ್ತದ ಎಸ್ಸೆಲ್ ವೆಲ್‌ ಕಾನ್ ವಾಣಿಜ್ಯ ಸಂಕೀರ್ಣದಲ್ಲಿ ರವಿವಾರ ಶುಭಾರಂಭಗೊಂಡಿತು.

ಬೆಂದೂರ್‌ವೆಲ್‌ನ ಎಸ್ಸೆಲ್ ವೆಲ್‌ ಕಾನ್ ಕಟ್ಟಡದಲ್ಲಿನ ಪೂರ್ವಿಕಾ ನೂತನ ಮಳಿಗೆಯನ್ನು ಅಂಗಡಿ ಪಾಲುದಾರರಾದ ಅಬ್ದುಲ್ ಅಝೀಝ್ ಮತ್ತು ಉಮರ್ ಫಾರೂಕ್ ಉದ್ಘಾಟಿಸಿದರು. ಸಿಟಿ ಸೆಂಟರ್ ಮಾಲ್‌ನ ನೂತನ ಮಳಿಗೆಯನ್ನು ಸಿಟಿ ಸೆಂಟರ್ ಮಾಲ್ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಅರ್ಶದ್ ಉದ್ಘಾಟಿಸಿದರು.

"ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಹೊಸ ಮಳಿಗೆಯನ್ನು ಪರಿಚಯಿಸಿರುವ ಪೂರ್ವಿಕಾ ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವಂತಾಗಲಿ. ಜನತೆಗೆ ಇಂದು ಮೊಬೈಲ್ ಅತ್ಯಾವಶ್ಯಕ ಸಾಧನವಾಗಿದ್ದು, ನೂತನ ಮಳಿಗೆ ಹೆಚ್ಚಿನ ಆಯ್ಕೆ ಮತ್ತು ಆಕರ್ಷಕ ದರವನ್ನು ಹೊಂದಿದ್ದು ಸಂಸ್ಥೆ ಯಶಸ್ವಿಯಾಗಿ ಮುಂದುವರಿಯಲಿ" ಎಂದು ಅಬ್ದುಲ್ ಅಝೀಝ್ ಹಾರೈಸಿದರು.

ಪೂರ್ವಿಕಾ ಮೊಬೈಲ್ಸ್‌ನ ಏರಿಯಾ ಸೇಲ್ಸ್ ಮ್ಯಾನೇಜರ್ ವೆಂಕಟ್ ಮಾತನಾಡಿ, "ಪೂರ್ವಿಕಾ ಮೊಬೈಲ್ಸ್ ಸಂಸ್ಥೆಯು ಗ್ರಾಹಕರಿಗೆ ಆಯ್ದ ಸ್ಮಾರ್ಟ್ ಫೋನ್‌ಗಳಿಗೆ ಶೇ.35ರಷ್ಟು ರಿಯಾಯಿತಿ ಮತ್ತು ಝೀರೊ ಡೌನ್ ಪೇಮೆಂಟ್ ಮುಂತಾದ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಎರಡು ಹೊಸ ಶಾಖೆಗಳಲ್ಲೂ ಗ್ರಾಹಕರಿಗೆ ಪ್ರತಿ ಖರೀದಿ ಸಂದರ್ಭದಲ್ಲೂ ಉಚಿತ ಕೊಡುಗೆಗಳನ್ನು ನೀಡುತ್ತಿದೆ" ಎಂದರು.

ಎರಡು ಮಳಿಗೆಗಳಲ್ಲೂ 40 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಮೊಬೈಲ್‌ಗಳ ಲೈವ್ ಡೆಮೊ ಸೌಲಭ್ಯ ಒದಗಿಸಲಾಗುತ್ತಿದೆ. ಮೊಬೈಲ್ ಫೋನ್ ಗಳ ಜತೆಗೆ ಟ್ಯಾಬ್ಲೆಟ್ಸ್ ಮತ್ತು ಮೊಬೈಲ್ ಬಿಡಿ ಭಾಗಗಳ ಮಾರಾಟ ಕೂಡಾ ಇದೆ. ಮೊಬೈಲ್‌ಗಳ ಸರ್ವಿಸ್ ವ್ಯವಸ್ಥೆಯನ್ನೂ ನೂತನ ಮಳಿಗೆಗಳು ಹೊಂದಿವೆ. 599 ರೂ.ನಿಂದ ಕ್ಯಾಮೆರಾ ಮೊಬೈಲ್, 2,849 ರೂ.ನಿಂದ 4ಜಿ ಮೊಬೈಲ್ ಸೆಟ್‌ಗಳು ಲಭ್ಯವಿದೆ. ಗ್ರಾಹಕರಿಗೆ ಮಾಸಿಕ ಕಂತುಗಳ ಮೂಲಕ ಖರೀದಿ ಯೋಜನೆಯನ್ನೂ ರೂಪಿಸಿದೆ ಎಂದು ಅವರು ಹೇಳಿದರು.

ಪೂರ್ವಿಕಾ ಮೊಬೈಲ್ಸ್ ಸಂಸ್ಥೆಯು ತಮಿಳುನಾಡು, ಪಾಂಡಿಚೇರಿ ಮತ್ತು ಕರ್ನಾಟಕದಲ್ಲಿ 250 ಮಳಿಗೆಗಳನ್ನು ಹೊಂದಿವೆ. ಕರ್ನಾಟಕದಲ್ಲೇ 30 ಶಾಖೆಗಳನ್ನು ಹೊಂದಿದೆ. ಮಂಗಳೂರಿನಲ್ಲಿ ಎರಡು ಶಾಖೆಗಳನ್ನು ಉದ್ಘಾಟಿಸುವ ಮೂಲಕ ಮಂಗಳೂರಿನಲ್ಲಿ ಮೂರು ಶಾಖೆಗಳು ಕಾರ್ಯಾಚರಿಸುವಂತಾಗಿದೆ ಎಂದು ವೆಂಕಟ್ ತಿಳಿಸಿದರು.

ಪೂರ್ವಿಕಾ ಮೊಬೈಲ್ಸ್‌ನ ಹಿರಿಯ ಮ್ಯಾನೇಜರ್‌ಗಳಾದ ಶಿವ, ಜೀವರತ್ನಂ, ರೀಜನಲ್ ಸೇಲ್ಸ್ ಮ್ಯಾನೇಜರ್ ಸರವಣನ್, ಏರಿಯಾ ಸೇಲ್ಸ್ ಮ್ಯಾನೇಜರ್ ವೆಂಕಟ್, ಸ್ಟೋರ್ ಮ್ಯಾನೇಜರ್ ದಿನೇಶ್ ಈ ಸಂದರ್ಭ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News