ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ: ‘ಸಂದೇಹ ಸಾಮ್ರಾಜ್ಯ’ ಪ್ರಥಮ

Update: 2017-12-03 10:22 GMT

ಉಡುಪಿ, ಡಿ.3: ಉಡುಪಿ ರಂಗಭೂಮಿ ವತಿಯಿಂದ ಏರ್ಪಡಿಸಲಾದ ಡಾ.ಟಿ.ಎಂ.ಎ.ಪೈ, ಎಸ್.ಎಲ್.ನಾರಾಯಣ ಭಟ್ ಹಾಗೂ ಮಲ್ಪೆ ಮಧ್ವ ರಾಜ್ ಸ್ಮಾರಕ 38ನೆಯ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಹೆಗ್ಗೋಡು ಕೆ.ವಿ.ಸುಬ್ಬಣ್ಣ ರಂಗ ಸಮೂಹ ಅಭಿನಯದ ‘ಸಂದೇಹ ಸಾಮ್ರಾಜ್ಯ’ ನಾಟಕವು ಪ್ರಥಮ ಪ್ರಶಸ್ತಿ ಗೆದ್ದುಕೊಂಡಿದೆ.

ಪ್ರಥಮ ಬಹುಮಾನವು 25,000 ರೂ. ನಗದು ಸಹಿತ ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕವನ್ನು ಒಳಗೊಂಡಿದೆ. ಭೂಮಿಕಾ ಹಾರಾಡಿ ತಂಡದ ‘ವೃತ್ತದ ವೃತ್ತಾಂತ’ ನಾಟಕವು ದ್ವಿತೀಯ (20,000 ರೂ. ನಗದು ಸಹಿತ ಫಲಕ) ಮತ್ತು ಲಾವಣ್ಯ ಬೈಂದೂರು ತಂಡದ ‘ಗಾಂಧಿಗೆ ಸಾವಿಲ್ಲ’ ನಾಟಕವು ತೃತೀಯ(15,000 ರೂ. ನಗದು ಸಹಿತ ಫಲಕ) ಬಹುಮಾನ ಗಳಿಸಿದೆ.

ವಿವಿಧ ಬಹುಮಾನಗಳ ವಿವರ ಈ ಕೆಳಗಿನಂತಿವೆ. ಶ್ರೇಷ್ಠ ನಿರ್ದೇಶನ: ಪ್ರ- ಮಂಜುನಾಥ್ ಎಲ್.ಬಡಿಗೇರ(ಸಂದೇಹ ಸಾಮ್ರಾಜ್ಯ), ದ್ವಿ- ಬಿ.ಎಸ್. ರಾಮಶೆಟ್ಟಿ ಹಾರಾಡಿ(ವೃತ್ತದ ವೃತ್ತಾಂತ), ತೃ- ಗುರುರಾಜ ಮಾರ್ಪಳ್ಳಿ( ರಥಯಾತ್ರೆ). ಶ್ರೇಷ್ಠ ನಟ: ಪ್ರ-ಏಸು ಪ್ರಕಾಶ್(ಸಂದೇಹ ಸಾಮ್ರಾಜ್ಯದ ವಿಜಯರಾಯರು ಪಾತ್ರ), ದ್ವಿ- ರವಿ ಪೇತ್ರಿ(ವೃತ್ತದ ವೃತ್ತಾಂತದ ನ್ಯಾಯಾಧೀಶ ಪಾತ್ರ), ತೃ- ರಾಜಗೋಪಾಲ್ ಶೇಟ್( ರಥಯಾತ್ರೆಯ ನಿರೂಪಕ ಪಾತ್ರ). ಶ್ರೇಷ್ಠ ನಟಿ: ಪ್ರ- ಶೈಲಜ ಪ್ರಕಾಶ್(ಸಂದೇಹ ಸಾಮ್ರಾಜ್ಯದ ಪೂರ್ಣಿಮಾದೇವಿ ಪಾತ್ರ), ದ್ವಿ-ಮಂಜುಳಾ ಜನಾದರ್ನ್(ಕೇಳೆ ಸಖಿ ಚಂದ್ರಮುಖಿಯ ಮಾಯಾ ಶೂರ್ಪನಖಿ ಪಾತ್ರ), ತೃ-ಪದ್ಮಶ್ರೀ ಹಾರೆಗೊಪ್ಪ(ಸಂದೇಹ ಸಾಮ್ರಾಜ್ಯದ ಶತತಾರ ಪಾತ್ರ)

 ಶ್ರೇಷ್ಠ ಸಂಗೀತ: ಪ್ರ-ರಥಯಾತ್ರೆ(ಸುಮನಸಾ ಕೊಡವೂರು), ದ್ವಿ- ಸಂದೇಹ ಸಾಮ್ರಾಜ್ಯ(ಕೆ.ವಿ.ಸುಬ್ಬಣ್ಣ ರಂಗಸಮೂಹ, ಹೆಗ್ಗೋಡು), ತೃ-ತುಕ್ರನ ಕನಸು (ಅನಿಕೇತನ ಸಿಯೋನ್ ಪ್ರತಿಷ್ಠಾನ, ಬೆಂಗಳೂರು). ಶ್ರೇಷ್ಠ ರಂಗಪರಿಕರ: ಪ್ರ- ವೃತ್ತದ ವೃತ್ತಾಂತ(ಭೂಮಿಕಾ ಹಾರಾಡಿ), ದ್ವಿ-ಸಂದೇಹ ಸಾಮ್ರಾಜ್ಯ (ರಂಗ ಸಮೂಹ, ಹೆಗ್ಗೋಡು), ತೃ-ಗಾಂಧಿಗೆ ಸಾವಿಲ್ಲ(ಲಾವಣ್ಯ ಬೈಂದೂರು). ಶ್ರೇಷ್ಠ ರಂಗಪ್ರಸಾಧನ: ಪ್ರ- ವೃತ್ತದ ವೃತ್ತಾಂತ(ಭೂಮಿಕಾ ಹಾರಾಡಿ) ದ್ವಿ- ಸಂದೇಹ ಸಾಮ್ರಾಜ್ಯ(ರಂಗಸಮೂಹ ಹೆಗ್ಗೋಡು) ತೃ-ಗಾಂಧಿಗೆ ಸಾವಿಲ್ಲ (ಲಾವಣ್ಯ ಬೈಂದೂರು). ಶ್ರೇಷ್ಠ ಬೆಳಕು: ಪ್ರ- ವೃತ್ತದ ವೃತ್ತಾಂತ, ದ್ವಿ- ಗಾಂಧಿಗೆ ಸಾವಿಲ್ಲ, ತೃ-ಮಲಾಲ ಅಲ್ಲಾ (ವನಸುಮ ವೇದಿಕೆ ಕಟಪಾಡಿ). ಶ್ರೇಷ್ಠ ಹಾಸ್ಯ: ಪೂರ್ಣೇಶ್ ಆಚಾರ್ಯ(ಕೇಳೆ ಸಖಿ ಚಂದ್ರಮುಖಿಯ ಭಾಗವತ ಪಾತ್ರ). ಮೆಚ್ಚುಗೆ ಬಹುಮಾನಗಳು: ಶ್ವೇತಾ ಮಣಿಪಾಲ(ವೃತ್ತದ ವೃತ್ತಾಂತ ನಾಟಕದ ವಲ್ಲಿ ಪಾತ್ರ), ಪ್ರಸನ್ನ ಎಚ್.ಎಸ್.ಹುಣಸೇಕೊಪ್ಪ(ಸಂದೇಹ ಸಾಮ್ರಾಜ್ಯ ನಾಟಕದ ಆನಂದರಾಯರುಪಾತ್ರ), ಸಿತಾರಾ(ವರಾಹ ಪುರಾಣದ ಹನುಮಕ್ಕ ಪಾತ್ರ), ಸುಬ್ರಹ್ಮಣ್ಯ ಜಿ.(ಗಾಂಧಿಗೆ ಸಾವಿಲ್ಲ ನಾಟಕದ ನಾತುರಾಂ ಗೋಡ್ಸೆ ಪಾತ್ರ), ಗುರುಮೂರ್ತಿ ವರದಾಮೂಲ(ಸಂದೇಹ ಸಾಮ್ರಾಜ್ಯದ ವೃಶ್ಚಿಕ ಪಾತ್ರ).

ಈ ಸ್ಪರ್ಧೆಯಲ್ಲಿ ರಾಮಕೃಷ್ಣ ಹೇರಳೆ, ಬೆಳಗೋಡು ರಮೇಶ ಭಟ್, ಜಯ ರಾಂ ನೀಲಾವರ್, ಜಯಶೇಖರ್ ಮಡಪ್ಪಾಡಿ ಹಾಗೂ ಅಭಿಲಾಷಾ ಹಂದೆ ತೀರ್ಪುಗಾರರಾಗಿ ಸಹಕರಿಸಿದ್ದರು. ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಜ.7ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಅಕ್ಷರ ಕೆ.ವಿ.ಗೆ ರಂಗ ಭೂಮಿ ಪ್ರಶಸ್ತಿ ಪ್ರದಾನ ಹಾಗೂ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿರುವ ಸಂದೇಹ ಸಾಮ್ರಾಜ್ಯ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News