ಹರಿದಾಸ ವಾಣಿಯ ಸಾಮೂಹಿಕ ಕಲಿಕೆ- ಗಾಯನ
ಉಡುಪಿ, ಡಿ.3: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಮಂಗಳೂರು ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನವು ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಹಯೋಗದೊಂದಿಗೆ ‘ಕೃಷ್ಣಾ ಎನ ಬಾರದೇ’ ಹರಿದಾಸ ವಾಣಿಯ ಸಾಮೂಹಿಕ ಕಲಿಕೆ- ಗಾಯನ ಮತ್ತು ಉಪ ನ್ಯಾಸ ಕಾರ್ಯಕ್ರಮವನ್ನು ರವಿವಾರ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಗಂಗಾಜಲಕ್ಕಿಂತಲೂ ನಾಮಸ್ಮರಣೆ ಶ್ರೇಷ್ಠವಾದುದು. ಆದುದರಿಂದ ಲೋಕಕಲ್ಯಾಣಕ್ಕೆ ಸಾಮೂಹಿಕ ಪ್ರಾರ್ಥನೆ ಅಗತ್ಯ. ಭಗವಂತನ ನಾಮಸ್ಮರಣೆಯಿಂದ ಪಾಪ ಪರಿಹಾರವಾಗುತ್ತದೆ ಎಂದು ಹೇಳಿದರು.
ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಮಂಗಳೂರು ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್.ಗುರುರಾಜ್, ಜಿಲ್ಲಾ ಭಜನಾ ಒಕ್ಕೂಟದ ಅಧ್ಯಕ್ಷ ಭೋಜರಾಜ್, ಕಾರ್ಯಾಧ್ಯಕ್ಷ ಮಧು ಸುವರ್ಣ, ಪ್ರಧಾನ ಕಾರ್ಯದರ್ಶಿ ಎ.
ಶಿವಕುಮಾರ್, ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ ಉಪಸ್ಥಿತರಿದ್ದರು.
ಬಳಿಕ ಗಾಯಕ ಮತ್ತು ಸಂಗೀತ ನಿರ್ದೇಶಕ ಎಂ.ಎಸ್.ಗಿರಿಧರ್ ತಂಡದಿಂದ ಹರಿದಾಸವಾಣಿಯ ಕಲಿಕೆ ಮತ್ತು ಗಾಯನ ಹೇಳಿಕೊಡಲಾಯಿತು. ಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್ ನಿರ್ದೇಶಕ ಡಾ. ವಂಶೀ ಕಷ್ಣಾಚಾರ್ಯ ದಾಸ ಸಾಹಿತ್ಯದ ಉಗಮ ಮತ್ತು ವೈಶಿಷ್ಯದ ಬಗ್ಗೆ ಉಪನ್ಯಾಸ ನೀಡಿದರು. ಅವಿಭಜಿತ ದ.ಕ. ಜಿಲ್ಲೆಯ ಭಜನಾ ಮಂಡಳಿಗಳ ಒಕ್ಕೂಟದ ಸುಮಾರು 2000ಕ್ಕೂ ಅಧಿಕ ುಂದಿ ಸದಸ್ಯರು ಪಾಲ್ಗೊಂಡಿದ್ದರು.