‘ಖುತ್ಬಾ ಹಜ್ಜತುಲ್ ವಿದಾ’ ವಿಚಾರ ಸಂಕಿರಣ
ಮಲ್ಪೆ, ಡಿ.3: ಮಾನವರೆಲ್ಲರೂ ಸಹೋದರರು. ಎಲ್ಲ ಮಾನವರ ಬಗ್ಗೆ ಅನುಕಂಪವೇ ತೋರುವುದೇ ಮಾನವೀಯತೆ. ವೈರಿಗಳನ್ನು ಪ್ರೀತಿಯ ಮೂಲಕ ಜಯಿಸಬೇಕೆಂಬುದು ಪ್ರವಾದಿ ನೀಡಿರುವ ಶಿಕ್ಷಣ ಎಂದು ಜಾಮಿಯ ದಾರುಸ್ಸ ಲಾಮ್ ಉಮರಾಬಾದ್‌ನ ಶೇಖುಲ್ ಹದೀಸ್ ಅಬ್ದುಲ್ಲಾಹ್ ಜೊಲಾಮ್ ಹೇಳಿದ್ದಾರೆ.
ಮಲ್ಪೆ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಶುಕ್ರವಾರ ಮಲ್ಪೆ ಜುಮಾ ಮಸೀದಿಯಲ್ಲಿ ಆಯೋಜಿಸಲಾದ ‘ಖುತ್ಬಾ ಹಜ್ಜತುಲ್ ವಿದಾ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಕೊಂಬಗುಡ್ಡೆಯ ಮೌಲಾನ ಪರ್ವೇಝ್ ನದ್ವಿ ಮಾತನಾಡಿ, ಬಡ್ಡಿಯಂತಹ ಘೋರ ಶೋಷಣಾ ಶಾಪ ತೀವ್ರತರ ಎಚ್ಚರಿಕೆ ಯಾಗಿದೆ. ಅದರ ವಿರುದ್ಧ ನಾವೆಲ್ಲ ಹೋರಾಡಬೇಕು. ಮಹಿಳೆಗೆ ಇಸ್ಲಾಮ್ ನೀಡಿರುವ ಅತ್ಯುನ್ನತ ಗೌರವದ ಸ್ಥಾನದ ಹಕ್ಕಿಗೆ ಚ್ಯುತಿ ಬಾರದಂತೆ ಪ್ರತಿಯೊ ಬ್ಬರು ಶ್ರಮಿಸಬೇಕು ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಸಂಚಾಲಕ ಅಝ್ಹರುಲ್ಲಾ ಕಾಸಿ ಮಾತನಾಡಿ, ಸಂಘಟನೆಯೊಂದಿಗೆ ಜೋಡಿರುವುದು ಹಾಗೂ ನಾಯಕ ನನ್ನು ಅನುಸರಿಸುವುದು ಪ್ರವಾದಿಯ ಕಟ್ಟಪ್ಪಣೆಯಾಗಿದೆ. ಸಮಾಜದಲ್ಲಿ ವೃದ್ಧಿಸು ತ್ತಿರುವ ದುಂದು ವೆಚ್ಚ ಮತ್ತು ಅಶ್ಲೀಲತೆಗಳಂತಹ ಪಿಡುಗುಗಳ ವಿರುದ್ಧ ಹೋರಾಡಬೇಕು ಎಂದು ತಿಳಿಸಿದರು.