×
Ad

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು ಅವರಿಗೆ ಸನ್ಮಾನ

Update: 2017-12-03 20:42 IST

ಮಂಗಳೂರು, ಡಿ.3: ಕರ್ನಾಟಕ ರಾಜ್ಯ ವಕ್ಫ್ ಸಮಿತಿ ಇದರ ದ.ಕ. ಜಿಲ್ಲಾ ಸಲಹಾ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಹಾಜಿ. ಯು.ಕೆ.ಮೋನು ಕಣಚೂರು ಅವರನ್ನು ಇಂದು ಮಂಗಳೂರು ಪುರಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮದರಂಗಿ ಪತ್ರಿಕಾ ಬಳಗದ ವತಿಯಿಂದ ಪ್ರಕಾಶಕ ಡಿ.ಐ. ಅಬೂಬಕರ್ ಕೈರಂಗಳ ಅಭಿನಂದಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್, ಅರಣ್ಯ ಸಚಿವ ಬಿ. ರಮಾನಾಥ ರೈ, ಮದರಂಗಿ ಪ್ರಸಾರ ನಿಗಮದ ರಫೀಖ್ ಅಮ್ಜದಿ ಮಾವಿನಕಟ್ಟೆ, ಅಶ್ರಫ್ ದೇರಳಕಟ್ಟೆ ಹಾಗೂ ವಿವಿಧ ಸಂಘಟನೆಗಳ ನಾಯಕರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News