ಆಳ್ವಾಸ್ ಉದ್ಯೋಗಸಿರಿ: 216 ಮಂದಿಗೆ ಉದ್ಯೋಗ; 838 ಅಭ್ಯರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆ

Update: 2017-12-03 17:03 GMT

ಮಂಗಳೂರು, ಡಿ. 3: ಆಳ್ವಾಸ್ ಉದ್ಯೋಗಸಿರಿಯಲ್ಲಿ 216 ಮಂದಿಗೆ ಉದ್ಯೋಗ ಲಭಿಸಿದ್ದು, 838 ಅಭ್ಯರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಒಟ್ಟು 3,857 ಮಂದಿ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, 71 ಕಂಪೆನಿಗಳು ಉದ್ಯೋಗಸಿರಿಯಲ್ಲಿ ಭಾಗವಹಿಸಿದ್ದವು. 3, 023 ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಿದ್ದರೆ, 834 ಅಭ್ಯರ್ಥಿಗಳು ಸ್ಥಳದಲ್ಲೇ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

ಹೆಸರು ನೋಂದಾಯಿಸಿರುವ ಎಲ್ಲಾ 3,857 ಅಭ್ಯರ್ಥಿಗಳು ಉದ್ಯೋಗ ಸಿರಿಯಲ್ಲಿ ಭಾಗವಹಿಸಿದ್ದಾರೆ. ಒಟ್ಟು ವಿವಿಧ 71 ಕಂಪೆನಿಗಳು ಉದ್ಯೋಗ ಸಿರಿಯಲ್ಲಿ ಭಾಗವಹಿಸಿದ್ದು, ಪೈಕಿ 52 ಕಂಪೆನಿಗಳಲ್ಲಿ ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News