ಉಗ್ರವಾದದ ವಿರುದ್ಧ ಸಮರದಲ್ಲಿ ಪಾಕ್ ಸಹಕಾರ ತೃಪ್ತಿಯಾಗಿಲ್ಲ: ಅಮೆರಿಕ

Update: 2017-12-03 17:46 GMT

ವಾಶಿಂಗ್ಟನ್,ಡಿ.3ಖ: ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಪಾಕಿಸ್ತಾನವು ನೀಡುತ್ತಿರುವ ಸಹಕಾರವು ತನಗೆ ತೃಪ್ತಿ ತಂದಿಲ್ಲವೆಂದು ಅಮೆರಿಕ ರವಿವಾರ ತಿಳಿಸಿದೆ. ಉಗ್ರ ಸಂಘಟನೆಗಳಾದ ತಾಲಿಬಾನ್ ಹಾಗೂ ಹಕ್ಕಾನಿ ಗುಂಪನ್ನು ಸದೆಬಡಿಯಲು ಇಸ್ಲಾಮಾಬಾದ್ ಈತನಕ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲವೆಂದು, ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ಹಾಫೀಝ್ ಸಯೀದ್‌ನ ಬಿಡುಗಡೆಯು, ಉಗ್ರವಾದದ ವಿರುದ್ಧ ಸಮರದಲ್ಲಿ ಪಾಕಿಸ್ತಾನವು ಒಂದು ಹೆಜ್ಜೆ ಹಿಂದೆ ಇಟ್ಟಂತಾಗಿದೆಯೆಂದು ಅವರು ಹೇಳಿದ್ದಾರೆ.

ಕೋಲ್‌ಮ್ಯಾನ್ ಕುಟುಂಬವನ್ನು ಪಾಕಿಸ್ತಾನದೊಳಗೆ ಹಕ್ಕಾನಿ ಜಾಲವು ಐದು ವರ್ಷಗಳ ಕಾಲ ಒತ್ತೆಸೆರೆಯಲ್ಲಿರಿಸಿರುವುದು, ಭಯೋತ್ಪಾದನೆಯ ವಿರುದ್ಧ ಸಮರದಲ್ಲಿ ಇಸ್ಲಾಮಾಬಾದ್ ಅಮೆರಿಕದೊಂದಿಗೆ ಸಹಕರಿಸುತ್ತಿಲ್ಲವೆಂಬುದಕ್ಕೆ ಸೂಚನೆಯಾಗಿದೆ ಯೆಂದು ಅವರು ಹೇಳಿದ್ದಾರೆ.

‘‘ನಮ್ಮ ರಾಜತಾಂತ್ರಿಕ ಒತ್ತಡ ಹಾಗೂ ನಮ್ಮ ಗುಪ್ತಚರ ಏಜೆನ್ಸಿಗಳ ಅವಿಶ್ರಾಂತ ಶ್ರಮವು ಕೋಲ್‌ಮ್ಯಾನ್ ಕುಟುಂಬದ ಬಿಡುಗಡೆಗೆ ದಾರಿ ಮಾಡಿಕೊಟ್ಟತೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News