×
Ad

ಪೇಶಾವರ ಗುಂಡಿನ ದಾಳಿ ಪ್ರಕರಣ: 9 ಮಂದಿ ಶಂಕಿತರ ಬಂಧನ

Update: 2017-12-03 23:20 IST

ಇಸ್ಲಾಮಾಬಾದ್,ಡಿ.3: ಪೇಶಾವರದ ಕೃಷಿ ತರಬೇತಿ ಸಂಸ್ಥೆಯಲ್ಲಿ ಶಂಕಿತ ತಾಲಿಬಾನ್ ಬಂಡುಕೋರರು ದಾಳಿ ನಡೆಸಿ,ಕನಿಷ್ಠ 12 ಮಂದಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪಾಕ್ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.

ಶನಿವಾರ ಬುರ್ಖಾ ಧರಿಸಿದ್ದರೆನ್ನಲಾದ ಮೂವರು ತಾಲಿಬಾನ್ ಉಗ್ರರು, ಪೇಶಾವರದ ಕೃಷಿ ತರಬೇತಿ ಸಂಸ್ಥೆಯೊಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ 12 ಮಂದಿಯನ್ನು ಹತ್ಯೆಗೈದಿದ್ದರು. ಮೃತರಲ್ಲಿ ಆರು ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಯ ಬಳಿಕ ಪೇಶಾವರದ ಆಸುಪಾಸಿನ ಪಟ್ಟಣಗಳಾದ ಬಧ್‌ಬೆರ್,ತೆಲಾಬಂದ್ ಹಾಗೂ ಇತರ ಪ್ರದೇಶಗಳಲ್ಲಿ ದಾಳಿ ಕಾರ್ಯಾಚರಣೆಗಳನ್ನು ನಡೆಸಿ 9 ಮಂದಿ ಶಂಕಿತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಬಂಧನದ ವೇಳೆ ಆರೋಪಿಗಳ ಅಡಗುದಾಣದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News