ಗಾಂಧಿಯ ಸಂಕೇತ ಬಳಕೆ ಹಿಂದೆ ಹುನ್ನಾರ: ಡಾ.ಜಯಪ್ರಕಾಶ್ ಶೆಟ್ಟಿ

Update: 2017-12-03 17:54 GMT

ಉಡುಪಿ, ಡಿ.3: ಸರಕಾರಗಳು ಮಹಾತ್ಮ ಗಾಂಧಿಯನ್ನು ಚರಕ, ಪೊರಕೆಯ ಸಂಕೇತವಾಗಿ ಬಳಸಿಕೊಳ್ಳುವುದರ ಹಿಂದೆ ದೊಡ್ಡ ಹುನ್ನಾರ ಅಡಗಿದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕ ಡಾ.ಜಯಪ್ರಕಾಶ್ ಶೆಟ್ಟಿ ಆರೋಪಿಸಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ವತಿಯಿಂದ ರವಿವಾರ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆದ ಪದವಿ ವಿದ್ಯಾರ್ಥಿಗಳ ಯುವ ರಂಗ ತರಬೇತಿ ಶಿಬಿರದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.

ಗಾಂಧೀಜಿಯ ತತ್ವಾದರ್ಶಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗೋಡ್ಸೆಯ ಅಬ್ಬರ ಇಂದು ಹೆಚ್ಚಾಗುತ್ತಿದ್ದು, ಮಂದಿರ ನಿರ್ಮಿಸುವ ಹಂತಕ್ಕೆ ಬೆಳೆದಿದೆ. ಗಾಂಧೀಜಿಯ ಉಡುಗೆ, ತೊಡುಗೆಯನ್ನು ಹಾಕಿಕೊಂಡು ಗಾಂಧಿ ಎಂಬುದಾಗಿ ಕರೆಸಿಕೊಳ್ಳಲು ಅನೇಕರು ಪ್ರಯತ್ನಿಸುತ್ತಿ ದ್ದಾರೆ ಎಂದು ಅವರು ಟೀಕಿಸಿದರು.

ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಪ್ರೊ.ಮುರಳೀಧರ್ ಉಪಾಧ್ಯ ಹಿರಿಯಡಕ, ಉಪಾಧ್ಯಕ್ಷರಾದ ಸಂತೋಷ್ ಬಲ್ಲಾಳ್, ನಾಗೇಶ್ ಕುಮಾರ್ ಉದ್ಯಾವರ, ಕೋಶಾಧಿಕಾರಿ ವೇದವ್ಯಾಸ ಭಟ್, ರಂಗ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಉಪಸ್ಥಿತರಿದ್ದರು.
ಜತೆ ಕಾರ್ಯದರ್ಶಿ ಜಿ.ಪಿ.ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿ ದರು. ಬಳಿಕ ಶಿಬಿರಾರ್ಥಿಗಳಿಂದ ಪ್ರಸನ್ನ ರಚನೆಯ ಸಂತೋಷ್ ನಾಯಕ್ ಪಟ್ಲ ನಿರ್ದೇಶನದ ‘ಕೊಂದವರಾರು’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News