×
Ad

ಲಂಡನ್ ಪಕ್ಕದ ಈ ಗ್ರಾಮದಲ್ಲಿ ವಿಜಯ್ ಮಲ್ಯ ಹೀರೋ ಇದ್ದಂತೆ!

Update: 2017-12-04 11:16 IST

ಟೆವಿನ್, ಡಿ.4: ಭಾರತದ ಹಲವಾರು ಬ್ಯಾಂಕುಗಳಿಗೆ ರೂ.9,000 ಕೋಟಿಗೂ ಅಧಿಕ ಸಾಲ ಬಾಕಿಯಿರಿಸಿ ದೇಶ ತೊರೆದು ಇಂಗ್ಲೆಂಡಿನ್ ರಾಜಧಾನಿ ಲಂಡನ್ ಪಕ್ಕದ ಟೆವಿನ್ ಎಂಬ ಗ್ರಾಮದಲ್ಲಿ ನೆಲೆಸಿರುವ ಮದ್ಯ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡಲು ಯತ್ನಗಳು ಬಹಳ ಸಮಯದಿಂದ ನಡೆಯುತ್ತಿದ್ದರೂ ಟೆವಿನ್ ಗ್ರಾಮದ ಜನರು ಮಾತ್ರ ಮಲ್ಯ ತಮ್ಮ ಗ್ರಾಮದಲ್ಲೇ ಇರಲಿ ಎಂದು ಬಯಸುತ್ತಿದ್ದಾರೆ.

ಲಂಡನ್ನಿನಿಂದ 48 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮವಾಗಿರುವ ಟೆವಿನ್ ನ ಜನರಿಗೆ ಮಾತ್ರ ಮಲ್ಯ ಹೀರೋ ಇದ್ದಂತೆ. ಅವರ ನಡೆ, ನುಡಿ, ಅವರ ಸಂಪತ್ತು ಹಾಗೂ ಗ್ರಾಮಕ್ಕಾಗಿ ಅವರು ಖರೀದಿಸಿದ ಕ್ರಿಸ್ಮಸ್ ಟ್ರೀ ಅಲ್ಲಿನ ಜನರನ್ನು ಅವರತ್ತ ಆಯಸ್ಕಾಂತದಂತೆ ಸೆಳೆದಿದೆಯಲ್ಲದೆ ಮಲ್ಯ ಆ ಗ್ರಾಮದ ಸುಮಾರು 2,000ದಷ್ಟು ಜನರ ಗೌರವ ಹಾಗೂ ಬೆಂಬಲವನ್ನೂ ಸಂಪಾದಿಸಿದ್ದಾರೆ.

‘‘ಮಲ್ಯ ಈ ಗ್ರಾಮದ ಆಸ್ತಿಯಿದ್ದಂತೆ. ಅವರಂಥವರು ನಮ್ಮ ಜತೆಗಿರುವುದು ನಮಗೆ ಸಂತಸ ತಂದಿದೆ. ಅವರು ಫಾರ್ಮ್ಯುಲಾ ಒನ್ ರೇಸಿನಲ್ಲೂ ಆಸಕ್ತಿ ವಹಿಸಿರುವುದು ನಮಗೆ ಸಂತೋಷ’’ ಎನ್ನುತ್ತಾರೆ ರೋಸ್ ಎಂಡ್ ಕ್ರೌನ್ ಪಬ್ ಇಲ್ಲಿನ ಬಾರ್ ಮ್ಯಾನ್ ಲುವಿಸ್ ಹ್ಯಾಮಿಲ್ಟನ್. ಮಲ್ಯ ತಮ್ಮ ಟೆವಿನ್ ಮನೆಯನ್ನು ಲುವಿಸ್ ಹ್ಯಾಮಿಲ್ಟನ್ ಅವರ ತಂದೆಯಿಂದ ಖರೀದಿಸಿದ್ದರೂ, ಮನೆಯನ್ನು ಲೇಡಿವಾಕ್ ಎಲ್.ಎಲ್.ಪಿ. ಎಂಬ ಕಂಪೆನಿಯ ಹೆಸರಿನಲ್ಲಿ ಅಡವಿಡಲಾಗದೆ. ಸ್ವಿರ್ಝಲ್ಯಾಂಡ್ ಮೂಲಕದ ಆಂಡ್ರಿಯಾ ರಿಶಾಲ್ ವಲ್ಲಭ್ ಹಾಗೂ ತೆರಿಗೆದಾರರ ಸ್ವರ್ಗ ಸೈಂಟ್ ಕಿಟ್ಸ್ ಮತ್ತು ನೆವಿಸ್ ಮೂಲದ ಕಾಂಟಿನೆಂಟಲ್ ಅಡ್ಮಿನಿಸ್ಟ್ರೇಶನ್ ಸರ್ವಿಸಸ್ ಲಿಮಿಟೆಡ್ ಈ ಲೇಡಿವಾಕ್ ಕಂಪೆನಿಯ ಇಬ್ಬರು ಸದಸ್ಯರಾಗಿದ್ದಾರೆ.

‘‘ಗ್ರಾಮದಲ್ಲಿ ಪ್ರತೀ ವರ್ಷ ನಡೆಯುವ ಟೆವಿನ್ ಕ್ಲಾಸಿಕ್ ಕಾರು ಶೋದಲ್ಲಿ ಮಲ್ಯ ಭಾಗಿಯಾಗುತ್ತಾರೆ. ಇಲ್ಲಿ ಯಾರು ಕೂಡಾ ತಮ್ಮ ಕಿಸೆಯಿಂದ ಹಣ ಖರ್ಚು ಮಾಡಿ ಕ್ರಿಸ್ಮಸ್ ಟ್ರೀ ಕೊಡುಗೆ ನೀಡುವುದಿಲ್ಲ. ಆದರೆ ಮಲ್ಯ ನೀಡಿದ ಕ್ರಿಸ್ಮಸ್ ಟ್ರೀಗೆ 1,500 ಪೌಂಡ್ (ಅಂದಾಜು ರೂ.13 ಲಕ್ಷ) ಆಗಬಹುದು. ಅವರು ಏನೋ ಸಮಸ್ಯೆಯಲ್ಲಿದ್ದಾರೆಂದು ಜನರಿಗೆ ಗೊತ್ತು. ಶ್ರೀಮಂತರೂ ಸಮಸ್ಯೆಯಲ್ಲಿ ಸಿಲುಕುತ್ತಾರೆ ಅಲ್ಲವೇ? ಆದರೆ ಅವರ ಗಡೀಪಾರು ಆಗದಿರಲಿ ಅವರು ನನ್ನ ಪಬ್ ಗೂ ಬರುವರೆಂಬ ನಿರೀಕ್ಷೆ’’ ಎನ್ನುತ್ತಾರೆ ಲುವಿಸ್.

ಮಲ್ಯ ಗ್ರಾಮದ ಪ್ಲೂಮ್ ರೆಸ್ಟಾರೆಂಟಿಗೆ ಭೇಟಿ ನೀಡುತ್ತಾರೆ ಹಾಗೂ ಅಲ್ಲಿನ ಸಿಬ್ಬಂದಿಯನ್ನು ತಮ್ಮ ಮನೆಯಲ್ಲಿನ ದೀಪಾವಳಿ ಪಾರ್ಟಿಗೂ ಆಹ್ವಾನಿಸಿದ್ದರಂತೆ. ಮಲ್ಯ ಅವರು ಟೆವಿನ್ ಗ್ರಾಮದ ಕಂಟ್ರಿ ಬಂಪ್ಕಿನ್ ಕೆಫೆಗೂ ತಮ್ಮ ಕುಟುಂಬದ ಜತೆ ಬರುತ್ತಾರೆ ಆದರೆ ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಮಲ್ಯ ಗಡೀಪಾರು ಸಂಬಂಧಿತ ಪ್ರಕರಣ ಇಂದು ವಿಚಾರಣೆಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News