×
Ad

ಜವಾನ್ ಫ್ರೆಂಡ್ಸ್ ಅಧ್ಯಕ್ಷರಾಗಿ ರಿಯಾಝ್ ಪುನರಾಯ್ಕೆ.

Update: 2017-12-04 11:55 IST

ಬಂಟ್ವಾಳ, ಡಿ.4: ಬಿ.ಸಿ.ರೋಡ್  ನ ಸಾಮಾಜಿಕ ಸೇವಾ ಸಂಸ್ಥೆ ಜವಾನ್ ಫ್ರೆಂಡ್ಸ್ ನ ಮಹಾಸಭೆಯು ರಿಯಾಝ್ ಜವಾನ್ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡ್ ನಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಅಧ್ಯಕ್ಷರಾಗಿ ರಿಯಾಝ್ ಜವಾನ್ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಸತ್ತಾರ್ ನಂದರಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ, ಕಾರ್ಯದರ್ಶಿಯಾಗಿ ನವಾಝ್ ಕೈಕಂಬ, ಕೋಶಾಧಿಕಾರಿಯಾಗಿ ಯೂನುಸ್ ನೌಫಲ್ ಬಂಟ್ವಾಳ, ಎನ್ನಾರೈ ಮುಖ್ಯಸ್ಥರಾಗಿ ನಿಝಾರ್ ಲೊರೆಟ್ಟೋಪದವು, ಜುನೈದ್ ಮಂಡಾಡಿ ಹಾಗೂ ಸದಸ್ಯರಾಗಿ ನಝೀರ್ ಪರ್ಲಿಯಾ, ದಾವೂದ್ ನೆಲ್ಯಾಡಿ, ಇಕ್ಬಾಲ್ ಕುಕ್ಕಾಜೆ, ಯಾಸಿರ್ ಬಂಟ್ವಾಳ, ತುಫೈಲ್ ಕೊಡಿಪಾಡಿ, ಮುಸ್ತಫಾ ಮಲ್ಲೂರು, ಹನೀಫ್ ಬಹರೈನ್, ಸೈಫುಲ್ಲಾ ಪರ್ಲಿಯಾ ಅವರನ್ನು ಆಯ್ಕೆ ಮಾಡಲಾಯಿತು.

ಆಶಿಕ್ ಕುಕ್ಕಾಜೆ ಸ್ವಾಗತಿಸಿದರು. ಇಕ್ಬಾಲ್ ಕುಕ್ಕಾಜೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News