×
Ad

ಪೆರುವಾಯಿಯಲ್ಲಿ ಮೀಲಾದ್ ಫೆಸ್ಟ್

Update: 2017-12-04 12:21 IST

ವಿಟ್ಲ, ಡಿ.4: ಪೆರುವಾಯಿಯ ಸಿರಾಜುಲ್ ಹುದಾ  ಹಳೆ  ವಿದ್ಯಾರ್ಥಿ  ಅಸೋಸಿಯೇಶನ್  ವತಿಯಿಂದ 'ಮೀಲಾದ್ ಫೆಸ್ಟ್- 2017' ಕಾರ್ಯಕ್ರಮ  ಚೆರ್ವತ್ತೂರು ಸೈಯದ್ ಮಿಹ್ರಾಜ್ ತಂಙಳ್ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಇಸ್ಲಾಮಿಕ್  ಸಾಂಸ್ಕೃತಿಕ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳಿಂದ  ಬುರ್ದಾ ಮಜ್ಲಿಸ್ ನಡೆಯಿತು .

ಪೆರುವಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಜಮಾಅತ್ ಪದಾಧಿಕಾರಿಗಳು ಧ್ವಜಾರೋಹಣದ ಮೂಲಕ ಮೀಲಾದ್ ಜಾಥಾ ನಡೆಯಿತು. ಜಾಥಾವು ಸ್ಥಳೀಯ ಮುಹಿಯುದ್ದೀನ್ ಮಸೀದಿಗೆ ತೆರಳಿ ದರ್ಗಾ ಝಿಯಾರತ್ ನಡೆಸಿ ಓಣಿಬಾಗಿಲು ಮದ್ರಸಕ್ಕೆ ತೆರಳಿ ಅಲ್ಲಿಂದ ಮುಚ್ಚಿರಪದವು ಮೇಲ್ಗಡೆ ಹಾಗೂ  ಕೆಳಗಿನ ಮದ್ರಸದ ಹಾದಿಯಲ್ಲಿ ಸಾಗಿ ಬದ್ರಿಯಾ ಜುಮಾ ಮಸೀದಿಗೆ ಹಿಂದಿರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರೀಫ್ ಮದನಿ ಉಸ್ತಾದ್ ವಹಿಸಿದ್ದರು. ಸುನ್ನಿ ಫೈಝಿ ಜಿ.ಎಂ.ಅಬೂಬಕರ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ  ಸೈಯದ್ ಮಿಹ್ರಾಜ್ ತಂಙಳ್, ಗಫೂರ್  ಹನೀಫಿ ಉಸ್ತಾದ್ ಮಾತನಾಡಿದರು.

ವೇದಿಕೆಯಲ್ಲಿ ಹನೀಫ್  ಕಾಮಿಲ್  ಸಖಾಫಿ ಸದರ್ ಉಸ್ತಾದ್ ಎಸ್.ಎಚ್.ಎಂ.ಪಿ., ಹಾರಿಸ್ ಹಿಮಮಿ ಉಸ್ತಾದ್, ಬಿಜೆಎಂ ಜಮಾಅತ್ ಪದಾಧಿಕಾರಿಗಳು  ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಿಯಾಝ್ ವಂದಿಸಿದರು. ಸಿರಾಜುಲ್ ಹುದಾ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕ ಸಮೀರ್ ದರ್ಖಾಸ್ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News