ರೋಗಿಗಳಿಗೆ ಹಣ್ಣುಹಂಪಲು ವಿತರಣೆ
Update: 2017-12-04 19:14 IST
ಮಂಗಳೂರು, ಡಿ.4: ದಾರುಲ್ ಅಶ್-ಅರಿಯ್ಯ ಹಿದ್ಯಾ ಸಂಸ್ಥೆಯ ಶಿಲ್ಪಿಮರ್‌ಹೂಂ ಸುರಿಬೈಲ್ ಉಸ್ತಾದ್‌ರ 16ನೆ ವಾರ್ಷಿಕ ಅನುಸ್ಮರಣೆ ಆಂಡ್ ನೇರ್ಚೆ ಪ್ರಯಕ್ತ ನಗರದ ವೆನ್‌ಲಾಕ್ ಆಸ್ಪತ್ರೆಯ ಸಾವಿರಕ್ಕೂ ಅಧಿಕ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಅಬ್ದುಲ್ ವಾಜಿದ್ ಹನೀಫಿ, ಅಬ್ಬಾಸ್ ಮುಸ್ಲಿಯಾರ್, ದಾರುಲ್ ಅಶ್-ಅರಿಯ್ಯಿ ಮ್ಯಾನೇಜರ್ ಅಬ್ದುಲ್ ರಶೀದ್ ಹನೀಫಿ, ಇಬ್ರಾಹೀಂ ಕಂಡಿಗ, ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ಎನ್.ಸಿ. ರೋಡ್ ಶಾಖಾಧ್ಯಕ್ಷ ಕರೀಂ ಕದ್ಕಾರ್, ದಾರುಲ್ ಅಶ್-ಅರಿಯ್ಯಾ ಮುಅಲ್ಲಿಂ ಅಬ್ದುಲ್ ಅಝೀಝ್ ಮದನಿ ಉಪಸ್ಥಿತರಿದ್ದರು.