ಶಾಂತಿ ಭಂಗ: ನಾಲ್ವರ ಬಂಧನ
Update: 2017-12-04 22:54 IST
ಬೈಂದೂರು, ಡಿ.4: ಬೈಂದೂರು ಹೊಸ ಬಸ್ ನಿಲ್ದಾಣದ ಬಳಿಯ ಯೋಜನಾ ನಗರ ಕಡೆಗೆ ಹೋಗುವ ರಸ್ತೆಯಲ್ಲಿ ಡಿ.3ರಂದು ಮಧ್ಯರಾತ್ರಿ 12ಗಂಟೆ ಸುಮಾರಿಗೆ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಾಡಿ ಕೊಂಡು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಯೋಜನಾ ನಗರದ ಅಣ್ಣಪ್ಪ(33), ಧನ್ಯ ಭಂಡಾರಿ(27), ಕೆರ್ಗಾಲ್ ನಾಯ್ಕನಕಟ್ಟೆಯ ಯೋಗೇಶ(21), ವಿಶ್ವನಾಥ(22) ಬಂಧಿತ ಆರೋಪಿಗಳು. ಇವರಿಂದ ಮೂರು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.