ಉಡುಪಿ ನಗರಸಭೆ ಸ್ಥಾಯೀ ಸಮಿತಿ: ಅಧ್ಯಕ್ಷರಾಗಿ ಹಾರ್ಮಿಸ್ ನೊರೊನ್ಹಾ
ಉಡುಪಿ, ಡಿ.4: ಇಂದು ನಡೆದ ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಸಭೆಯಲ್ಲಿ ಮೂಡುಬೆಟ್ಟು ವಾರ್ಡಿನ ಸದಸ್ಯ ಹಾರ್ಮಿನ್ ನೊರೊನ್ಹಾ ಸ್ಥಾಯೀ ಸಮಿತಿಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನಗರಸಭೆ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೌರಾಯುಕ್ತ ಡಿ.ಮಂಜುನಾಥಯ್ಯ ಚುಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಸ್ಥಾಯೀ ಸಮಿತಿ ಸದಸ್ಯ ನಾರಾಯಣ ಪಿ.ಕುಂದರ್, ಲತಾ ಆನಂದ ಶೇರಿಗಾರ್, ಚಂದ್ರಕಾಂತ ನಾಯಕ್, ರಮೇಶ್ ಕಾಂಚನ್, ಹೇಮಲತಾ ಹಿಲಾರಿ ಜತ್ತನ್, ಶಾಂತಾರಾಮ್ ಸಾಲ್ವಂಕಾರ್, ವಿಜಯಪೂಜಾರಿ, ಶಶಿರಾಜ್ ಕುಂದರ್, ರಮೇಶ್ ಪೂಜಾರಿ ಸಭೆಯಲ್ಲಿ ಉಪಸ್ಥಿತರಿದ್ದರು.
ಸ್ಥಾಯೀ ಸಮಿತಿ ಸದಸ್ಯ ನಾರಾಯಣ ಪಿ.ಕುಂದರ್ ಇವರು ಸ್ಥಾಯೀ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹಾರ್ಮಿಸ್ ನೊರೊನ್ಹಾ ಹೆಸರನ್ನು ಸೂಚಿಸಿದರು. ಸದಸ್ಯ ಚಂದ್ರಕಾಂತ್ ನಾಯಕ್ ಅನುಮೋದಿಸಿದರು. ಬೇರೆ ಯಾರೂ ಉಮೇದುವಾರರು ಇಲ್ಲದ ಕಾರಣ ಹಾರ್ಮಿಸ್ ನೊರೊನ್ಹಾ ಉಡುಪಿ ನಗರಸಭೆಯ ಪ್ರಸಕ್ತ ಸಾಲಿನ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಸರ್ವಾನು ಮತದಿಂದ ಆಯ್ಕೆಯಾದರು.