ಕದ್ರಿಯಲ್ಲಿ ಪುಟಾಣಿ ರೈಲಿಗೆ ಹೊಸ ರೂಪ
ಮಂಗಳೂರು, ಡಿ. 5: ನಗರದ ಕದ್ರಿ ಪಾರ್ಕ್‌ನಲ್ಲಿ ಪುಟಾಣಿ ರೈಲಿಗಾಗಿ ಮಕ್ಕಳು ನಿರೀಕ್ಷಿಸುತ್ತಿದ್ದ ಕಾಲ ಬರುತ್ತಿದೆ. ಅಂದರೆ ಸುಮಾರು 1.10 ಕೋ.ರೂ.ವೆಚ್ಚದಲ್ಲಿ ಪುಟಾಣಿ ರೈಲನ್ನು ಶಾಸಕ ಜೆ.ಆರ್.ಲೋಬೊ ಇದೀಗ ತರುತ್ತಿದ್ದಾರೆ.
ಕದ್ರಿಪಾಕ್‌ನಲ್ಲಿ 1983ರಲ್ಲಿ ಮಕಳಿಗಾಗಿ ಆರಂಭಿಸಿದ್ದ ಪುಟ್ಟಾಣಿ ರೈಲು 2013ರವರೆಗೆ ನಿರಾತಂಕವಾಗಿ ಸಾಗಿತ್ತು. ಆದರೆ ಈ ರೈಲು ಇದ್ದಕ್ಕಿದ್ದಂತೆಯೇ ಸ್ಥಗಿತಗಿಂಡಾಗ ಮಕ್ಕಳ ಮನಸ್ಸಿನಲ್ಲಿದ್ದ ಮಂದಹಾಸ ಮಂಕಾಯಿತು. ಜನಪ್ರತಿನಿದ್ಧಿಗಳು ಕೂಡಾ ಈ ರೈಲನ್ನು ಆರಂಭಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಿರಲಿಲ್ಲ. ರೈಲು ಮತ್ತೆ ಆರಂಭವಾಗುತ್ತದೆ ಎಂದು ಮಕ್ಕಳು ಕಾಯುತ್ತಾ ನಿಂತರು. ಆದರೆ ರೈಲು ಶುರುವಾಗಲೇ ಇಲ್ಲ. ತಾಂತ್ರಿಕ ಅಡಚಣೆಯಿಂದ ಇದರ ಚಾಲನೆ ನಿಂತಿದೆ ಎಂದು ಅಧಿಕಾರಿಗಳು ಹೇಳುತ್ತಾ ಕಾಲಹರಣ ಮಾಡಿದರು. ಇದೀಗ ಶಾಸಕ ಜೆ.ಆರ್.ಲೋಬೊರ ಪ್ರಯತ್ನದಿಂದ ಲಕ್ಷ ರೂ. ವೆಚ್ಚದಲ್ಲಿ ಪುಟಾಣಿ ರೈಲಿನ ಇಂಜಿನ್ ಮತ್ತು 3 ಬೋಗಿಗಳು ಮೈಸೂರಿನ ರೈಲ್ವೆ ಕಾರ್ಯಾಗಾರದಲ್ಲಿ ನಿರ್ಮಾಣವಾಗುತ್ತಿದ್ದು, ಈ ತಿಂಗಳೊಳಗೆ ಮತ್ತೆ ರೈಲು ಓಡಾಟ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿವೆ.
ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರವು ಪುಟ್ಟಾಣಿ ರೈಲಿಗೆ ಜೀವ ತುಂಬುತ್ತಿದ್ದಾರೆ. ರೈಲ್ವೆ ಇಲಾಖೆಯ ತಾಂತ್ರಿಕ ನೆರವಿನೊಂದಿಗೆ ಹಳಿ ಪರಿರ್ವತನೆ ಕೆಲಸ ಮಾಡಲಾಗಿತ್ತಿದೆ. ಈಗಾಲೇ ಇರುವ ಫ್ಲಾಟ್ ಫಾರಂ ಹಾಗೂ ರೈಲ್ವೆಶೆಡ್ಡನ್ನು ತೆರವುಗೊಳಿಸಿ ಸುಸಜ್ಜಿತವಾದ ರೈಲನ್ನು ಆರಂಭಿಸಲಾಗುತ್ತಿವೆ. ಎಲ್ಲವೂ ಸುಸೂತ್ರವಾಗಿ ಪೂರ್ಣಗೊಂಡರೆ ಹೊಸ ವರ್ಷದಲ್ಲಿ ಪುಟಾಣಿ ರೈಲು ಮತ್ತೆ ಚುಕು ಪುಕು ಸದ್ದು ಮಾಡುತ್ತದೆ.