×
Ad

ಮಂಗಳೂರು: ಡಿ.6ರಿಂದ ಎಸೆಸೆಲ್ಸಿ ಪಾಠ ಸರಣಿ

Update: 2017-12-05 19:59 IST

ಮಂಗಳೂರು, ಡಿ.5: ಮಂಗಳೂರು ಆಕಾಶವಾಣಿ ಕೇಂದ್ರವು ಸಿದ್ಧಪಡಿಸಿದಬಾನುಲಿ ಶಾಲೆಎಸೆಸೆಲ್ಸಿ ವಿದ್ಯಾರ್ಥಿಗಳ ಪಾಠ ಸರಣಿ ಡಿ.6ರಿಂದ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಪೂರ್ವಾಹ್ನ 11 ರಿಂದ 11:30ರವರೆಗೆ ಪ್ರಸಾರಗೊಳ್ಳಲಿದೆ. ಕಾರ್ಯಕ್ರಮ ಮೈಸೂರು ಹಾಗೂ ಧಾರವಾಡ ಕೇಂದ್ರಗಳಿಂದಲೂ ಸಮಯಕ್ಕೆ ಸಹ ಪ್ರಸಾರವಾಗುತ್ತದೆ.
 

ಎಸೆಸೆಲ್ಸಿಯ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ಪಾಠ ಮಾಲಿಕೆಯ ಸರಣಿಯಲ್ಲಿ ..ಜಿಲ್ಲೆಯ ಸರಕಾರಿ ಶಾಲೆಯ 21 ಶಿಕ್ಷಕರು ಪಾಲ್ಗೊಳ್ಳುತ್ತಿದ್ದಾರೆ. ಪರೀಕ್ಷೆಗೆ ಪಾಠವನ್ನು ಹೇಳಿಕೊಡುವ ಮತ್ತು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ವಿಧಾನವನ್ನು 42 ಪಾಠಮಾಲಿಕೆಯಲ್ಲಿ ವಿವರಿಸುವ ಸರಣಿಯನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರೇಡಿಯೋ ಕೇಳಿಸುವ ಮೂಲಕ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News