×
Ad

ಭಟ್ಕಳ: ಲ್ಯಾಂಪ್ಸ್ ಅಧ್ಯಕ್ಷರಾಗಿ ನಾಗಯ್ಯ ಮಾಸ್ತಿಗೊಂಡ

Update: 2017-12-05 20:09 IST

ಭಟ್ಕಳ, ಡಿ. 5: ಭಟ್ಕಳ ತಾಲೂಕು ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ಧೇಶಗಳ ಸಹಕಾರಿ ಸಂಘ (ಲ್ಯಾಂಪ್ಸ್) ಇದರ ನೂತನ ಅಧ್ಯಕ್ಷರಾಗಿ ನಾಗಯ್ಯ ಮಾಸ್ತಿಗೊಂಡ, ಉಪಾಧ್ಯಕ್ಷರಾಗಿ ಗಣಪಯ್ಯ ಮಾಸ್ತಿ ಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯ ಸಂದರ್ಭದಲ್ಲಿ ನಡೆದ ಸದಸ್ಯರ ನಡುವಿನ ಒಪ್ಪಂದದಂತೆ ಎರಡೂವರೆ ವರ್ಷ ಅವಧಿಯ ಅಧಿಕಾರ ಮುಗಿಸಿದ ಅಧ್ಯಕ್ಷ ಬಡಿಯಾ ಸೋಮಯ್ಯ ಗೊಂಡ ಮತ್ತು ಉಪಾಧ್ಯಕ್ಷ ರಮೇಶ ಈರಯ್ಯ ಗೊಂಡ ರಾಜಿನಾಮೆ ಸಲ್ಲಿಸಿದ ನಂತರ ಆ ಸ್ಥಾನ ತೆರವಾಗಿತ್ತು. ಸಹಕಾರಿ ಇಲಾಖೆಯ ಅಧಿಕಾರಿ ಜಿ.ಕೆ.ಭಟ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಲ್ಯಾಂಪ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ಗೊಂಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News