×
Ad

ಸೂರಿಂಜೆಯಲ್ಲಿ ಮೀಲಾದುನ್ನಬಿ ಆಚರಣೆ

Update: 2017-12-05 20:46 IST

ಮಂಗಳೂರು, ಡಿ. 5: ಸೂರಿಂಜೆ ಜುಮಾ ಮಸೀದಿ ಜಮಾಅತ್ ಕಮಿಟಿ ವತಿಯಿಂದ ಪ್ರವಾದಿ ಮುಹಮ್ಮದ್ (ಸ)ರ ಜನ್ಮದಿನವನ್ನು ಮರ್ಹೂಂ ಕೆ. ಮಾಮು ಬ್ಯಾರಿ ವೇದಿಕೆಯಲ್ಲಿ ಆಚರಿಸಲಾಯಿತು.

ಮಸೀದಿಯ ಅಧ್ಯಕ್ಷ ಎಸ್. ಉಸ್ಮಾನ್ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಖತೀಬ್ ಸೈಯದ್ ಹಬೀಬುರ್ರಹ್ಮಾನ್ ತಂಙಳ್ ಫೈಝಿ ಅಲ್ ಬುಖಾರಿ ಉದ್ಘಾಟಿಸಿದರು. ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಉಪನ್ಯಾಸ ನೀಡಿದರು. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಹಾಜಿ ಶಾಹುಲ್ ಹಮೀದ್ ಮೆಟ್ರೋ, ಸದಸ್ಯರಾದ ಹಾಜಿ ಅಬ್ದುಲ್ ಜಲೀಲ್ ಬದ್ರಿಯಾ, ಬ್ಯಾರಿ ಅಕಾಡಮಿಯ ಸದಸ್ಯ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಸೂರಿಂಜೆ ಗ್ರಾಪಂ ಉಪಾಧ್ಯಕ್ಷ ಜಿತೇಂದ್ರ ಶೆಟ್ಟಿ ಮಾತನಾಡಿದರು.

ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಕೆ.ಎ. ಲಿಯಾಕತ್ ಅಲಿ ಸ್ವಾಗತಿಸಿದರು. ಅಲಿ ಹಸನ್ ಕುಕ್ಕಾಜೆ ಕಿರಾಅತ್ ಪಠಿಸಿದರು. ಎಂ.ಬಿ. ಮಾಲಿಕ್ ಸ್ವಾಗತಗೀತೆ ಹಾಡಿದರು. ಅಹ್ಮದ್ ನಯೀಮ್ ಮುಕ್ವೆ ಪ್ರಾಸ್ತಾವಿಸಿದರು. ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು ವಂದಿಸಿದರು. ಟಿ. ಇಸ್ಮಾಯೀಲ್ ಪಾಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News