ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ತುಳುಕೂಟದ ಸನ್ಮಾನ
Update: 2017-12-05 21:21 IST
ಉಡುಪಿ, ಡಿ.5: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉಡುಪಿ ತುಳುಕೂಟದ ಸದಸ್ಯರಾಗಿರುವ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯ ಡಾ.ಪದ್ಮರಾಜ್ ಹೆಗ್ಡೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವಿಶ್ವನಾಥ್ ಶೆಣೈ ದಂಪತಿಗಳನ್ನು ತುಳುಕೂಟದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ಸಾಧಕರಿಬ್ಬರನ್ನೂ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ತುಳುಕೂಟದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಮಹಮ್ಮದ್ ಮೌಲಾ, ಕೋಶಾಧಿಕಾರಿ ಚೈತನ್ಯ ಎಂ.ಜಿ. ಹಾಗೂ ಸದಸ್ಯರಾದ ಯು.ಜೆ. ದೇವಾಡಿಗ, ಭುವನಪ್ರಸಾದ್ ಹೆಗ್ಡೆ, ಮನೋಹರ್ ತೋನ್ಸೆ, ಪ್ರಭಾಕರ ಭಂಡಾರಿ, ಮೋಹನ್ ಶೆಟ್ಟಿ, ಪ್ರಕಾಶ್ ಸುವರ್ಣ, ವಿವೇಕಾನಂದ, ದಿವಾಕರ ಸನಿಲ್, ತಾರಾ ಉಮೇಶ್ ಆಚಾರ್ಯ, ವೀಣಾ ಎಸ್.ಶೆಟ್ಟಿ, ಸರೋಜಾ ಯಶವಂತ್, ಯಶೋಧಾ ಕೇಶವ್ ಉಪಸ್ಥಿತರಿದ್ದರು.