ನಕಲು ನಿರಾಕ್ಷೇಪಣಾ ಪತ್ರ: ದೂರು
ಪಡುಬಿದ್ರಿ, ಡಿ. 5: ಫಿಶ್‌ಮಿಲ್ ಮತ್ತು ಆಯಿಲ್ ಕಂಪೆನಿಗೆ ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂಗೆ ನೀಡಿದ ದೃಢೀಕೃತ ಪತ್ರ ನಕಲು ಉದ್ದಿಮೆ ಪರವಾನಿಗೆ ನೀಡಿರುವ ಬಗ್ಗೆ ಉದ್ಯಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಪು ಠಾಣೆಗೆ ದೂರು ನೀಡಿದ್ದಾರೆ.
ಉದ್ಯಾವರದ ಪಿತ್ರೋಡಿಯಲ್ಲಿ ಕಾರ್ಯಾಚರಿಸುತ್ತಿರುವ ಯಶಸ್ವಿ ಫಿಶ್‌ಮುಲ್ ಮತ್ತು ಆಯಿಲ್ ಕಂಪೆನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಿರ್ವಹಣೆ ಮತ್ತು ಪಾಲನೆ ಉಪವಿಭಾಗ ಮೆಸ್ಕಾಂಗೆ ತನಿಖೆಗೆ ಅನುಕೂಲವಾಗುವಂತೆ ನೀಡಿದ ದೃಢೀಕೃತ ಪ್ರತಿಗಳಲ್ಲಿ ನಕಲು ಉದ್ದಿಮೆ ಪರವಾನಿಗೆ ಬಳಕೆಯಾಗಿರುವುದು ಕಂಡುಬಂದಿದೆ. 2014ರ ಜನವರಿ 11ರಂದು ಪಡುಬಿದ್ರಿ ಗ್ರಾಮ ಪಂ. ಅಭಿವೃದ್ಧಿ ಅಧಿಕಾರಿ ಪಂಚಾಕ್ಷರಿ ಸ್ವಾಮಿ ಕೇರಿಮಠ ಅವರ ಹೋಲಿಕೆಯ ಸಹಿಯಾಗಿದೆ. ಆ ಸಮಯದಲ್ಲಿ ಅವರು ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ ಎಂದು ಉದ್ಯಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮಾನಂದ ಪುರಾಣಿಕ್ ಎಂಬವರು ಕಾಪು ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.