×
Ad

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗಣೇಶ್ ಪ್ರಸಾದ್ ಪಾಂಡೇಲು

Update: 2017-12-05 22:33 IST
ಗಣೇಶ್ ಪ್ರಸಾದ್ ಪಾಂಡೇಲು, ಸಂತೋಷ್

ಉಡುಪಿ, ಡಿ.5: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ಉಪಸಂಪಾದಕ ಗಣೇಶ್ ಪ್ರಸಾದ್ ಪಾಂಡೇಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಡುಪಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ನಡೆದ ಸಂಘದ ಮಹಾಸಭೆ ಯಲ್ಲಿ ಈ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ರಾಜ್ ಟಿವಿಯ ವರದಿಗಾರ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿಯಾಗಿ ಸ್ಪಂದನಾ ವಾಹಿನಿಯ ವರದಿಗಾರ ದಿವಾಕರ್ ಭಂಡಾರಿ, ಉಪಾಧ್ಯಕ್ಷರುಗಳಾಗಿ ಉದಯ್ ಕುಮಾರ್ ಹೆಬ್ರಿ, ಕುಂದಾಪುರದ ಕೆ.ಸಿ.ರಾಜೇಶ್, ಪಡುಬಿದ್ರೆಯ ರಾಮಚಂದ್ರ ಆಚಾರ್, ಜೊತೆ ಕಾರ್ಯದರ್ಶಿಯಾಗಿ ಮೈಕಲ್ ರೋಡ್ರಿಗಸ್, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್ ಪಾಲೆಚ್ಚಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉಡುಪಿಯ ನವ್ಯಜ್ಯೋತಿ ನೆಲ್ಲಿಜೆ, ಕಾಪುವಿನ ಪುಂಡಲೀಕ ಮರಾಠೆ, ಬ್ರಹ್ಮಾವರದ ಗಣೇಶ್ ಸಾಬರಕಟ್ಟೆ, ಕುಂದಾಪುರದ ಮಜರ್, ನಾಗರಾಜ್ ರಾಯಪ್ಪನಮಠ, ಕಾರ್ಕಳದ ಕೆ.ಎಂ.ಖಲೀಲ್, ಮುಹಮ್ಮದ್ ಶರೀಫ್ ಕಾರ್ಕಳ ಆಯ್ಕೆಯಾದರು.

ಸಂಘದ ನಿರ್ಗಮನ ಅಧ್ಯಕ್ಷ ಜಯಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾಧಿಕಾರಿಯಾಗಿ ದಿನೇಶ್ ಕಿಣಿ, ಸಹಾಯಕ ಚುನಾವಣಾಧಿಕಾರಿ ಯಾಗಿ ಶಶಿಧರ್ ಮಾಸ್ತಿಬೈಲು ಸಹಕರಿಸಿದರು. ನಿರ್ಗಮನ ಪ್ರಧಾನ ಕಾರ್ಯ ದರ್ಶಿ ಗಣೇಶ್ ಪ್ರಸಾದ್ ಪಾಂಡೇಲು ವರದಿ ವಾಚಿಸಿದರು. ಕೋಶಾಧಿಕಾರಿ ರಾಜೇಶ್ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News