×
Ad

ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

Update: 2017-12-05 22:36 IST

ಉಡುಪಿ, ಡಿ.5: ಬಾಬರಿ ಮಸೀದಿಯನ್ನು ಅದೇ ಸ್ಥಳದಲ್ಲಿ ಪುನರ್ ನಿರ್ಮಿಸ ಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಉಡುಪಿ ಇದರ ವತಿಯಿಂದ ಅಪರ ಜಿಲ್ಲಾಧಿಕಾರಿ ಅನುರಾಧ ಅವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬಾಬರಿ ಮಸೀದಿಯನ್ನು ಅದೇ ಸ್ಥಳದಲ್ಲಿ ಪುನರ್ ನಿರ್ಮಿಸಿಕೊಡುವ ಬಗ್ಗೆ ಮಾಜಿ ಪ್ರಧಾನಿ ನರಸಿಂಹ ರಾವ್ ದೇಶದ ಜನತೆಗೆ ಕೊಟ್ಟ ಮಾತನ್ನು ಕೇಂದ್ರ ಸರಕಾರ ಪಾಲಿಸಬೇಕು. ಲಿಬ್ರಹಾನ್ ಆಯೋಗದ ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ಬಾಬರಿ ಮಸೀದಿ ಧ್ವಂಸ ಕಾರ್ಯದಲ್ಲಿ ಭಾಗಿಯಾದ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿ ಸಲಾಗಿದೆ.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್‌ನ ಜಿಲ್ಲಾ ಉಪಾಧ್ಯಕ್ಷ ವೌಲಾನಾ ಮುಹಮ್ಮದ್ ಜಾವೇದ್ ಖಾಸ್ಮಿ, ಪ್ರಧಾನ ಕಾರ್ಯ ದರ್ಶಿ ಹಾಫೀಝ್ ಅಬ್ದುಲ್ ಗಫೂರ್, ಸದಸ್ಯರಾದ ವೌಲಾನ ತೌಕೀರ್ ಖಾಸ್ಮಿ, ವೌಲಾನ ಫಾರೂಖ್, ಹಾಫೀಝ್ ಯೂನುಸ್, ಹಾಫೀಝ್ ರಹ ಮತುಲಾ್ಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News