ವಕೀಲರ ಬಂಧನ ಖಂಡಿಸಿ ಪ್ರತಿಭಟನೆ

Update: 2017-12-05 17:12 GMT

ಕೆ.ಆರ್.ನಗರ, ಡಿ.05 : ಜಿಲ್ಲಾ ಎಸ್.ಪಿ. ರವಿಚನ್ನಣ್ಣನವರ್ ಸೇರಿದಂತೆ ಪೋಲೀಸ್ ಇಲಾಖೆ ನ್ಯಾಯಾಲಯದಲ್ಲಿ ಕೆಲಸ ಮಾಡುವ ವಕೀಲರನ್ನು ಬಂಧಿಸುವ ಮೂಲಕ ಸರಕಾರದ ಪರವಾಗಿ ಕೆಲಸ ಮಾಡಿದ್ದಾರೆ ಎಂದು ವಕೀಲ ಅಂಕನಹಳ್ಳಿ ತಿಮ್ಮಪ್ಪ ಆರೋಪಿಸಿದ್ದಾರೆ. ವಕೀಲರ ಬಂಧನ ಖಂಡಿಸಿ ವಕೀಲರ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಡಿ.ಮಹದೇವಪ್ಪನವರ ನೇತೃತ್ವದಲ್ಲಿ ಸಭೆ ಸೇರಿದ ವಕೀಲರು ಹುಣಸೂರಿನ ಘಟನೆಯಲ್ಲಿ ವಕೀಲರನ್ನು ಬಂಧಿಸಿ ಅವರ ವಿರುದ್ದ ಎಫ್‌ಐಆರ್ ದಾಖಲಿಸಿರುವುದು ವಕೀಲರ ದಮನ ಮಾಡುವ ಹುನ್ನಾರವಾಗಿದ್ದು, ಇಂತಹ ಕೃತ್ಯಕ್ಕೆ ಮುಂದಾದ ಪೊಲೀಸರು ಸರಕಾರದ ಕೈಗೊಂಬೆಯಾಗಿ ವರ್ತಿಸಿದ್ದು, ಕೂಡಲೆ ವಕೀಲರನ್ನು ಬಿಡುಗಡೆಗೊಳಿಸಿ ಅವರ ವಿರುದ್ಧ ದಾಖಲು ಮಾಡಲಾಗಿರುವ ಎಫ್‌ಐಆರ್‌ನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮ, ಹಲಗೇಗೌಡಕೊಪ್ಪಲು ಹರೀಶ್, ನಾಗರಾಜ್, ತಿಪ್ಪೂರುತಿಮ್ಮೇಗೌಡ, ಕೆ.ಸಿ.ಶಿವಕುಮಾರ್, ಉದಯ್, ಶಶಿಕಾಂತ್, ಬಿ.ಎಸ್.ಶಿವಶಂಕರ್, ಪೂರ್ಣಿಮಾ, ಕೊಡಿಯಾಲಮಹೇಶ್, ಕಾಮೇನಹಳ್ಳಿ ಗಂಗಾಧರ್, ನೂತನ್, ದಿಲೀಪ್, ನೂತನ್, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News