×
Ad

ಡಿ. 7: ಕೂರ್ನಡ್ಕದ ದಿಲ್ ಕಾಂಪ್ಲೆಕ್ಸ್‌ನಲ್ಲಿ 'ಸ್ಟಾರ್ ಸಿರಾಮಿಕ್ಸ್' ಟೈಲ್ಸ್ ಸ್ಯಾನಿಟರಿವೇರ್ ಶುಭಾರಂಭ

Update: 2017-12-05 23:19 IST

ಪುತ್ತೂರು, ಡಿ. 5: ತಾಲೂಕಿನ ಎಪಿಎಂಸಿ ರಸ್ತೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ "ಸ್ಟಾರ್ ಸಿರಾಮಿಕ್" ಟೈಲ್ಸ್ ಸ್ಯಾನಿಟರಿವೇರ್ ಮಳಿಗೆಯು ಸ್ಥಳಾಂತರಗೊಂಡು ಇದೀಗ ಕೂರ್ನಡ್ಕದ ದಿಲ್ ಕಾಂಪ್ಲೆಕ್ಸ್‌ನಲ್ಲಿ ಡಿ. 7ರಂದು ಶುಭಾರಂಭಗೊಳ್ಳಲಿದೆ.

ಸೈಯದ್ ಕೆ.ಎಸ್. ಅಲಿ ತಂಙಳ್ ಕುಂಬೋಳ್ ದುವಾಃ ನೆರವೇರಿಸುವರು. ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ ಅವರು ಮಳಿಗೆಯನ್ನು ಉದ್ಘಾಟಿಸುವರು.

ಕೂರ್ನಡ್ಕ ಮುದರ್ರಿಸ್ ಅಬೂಬಕರ್ ಸಿದ್ದೀಕ್ ಅಹ್ಮದ್ ಜಲಾಲಿ, ಕಬಕ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಮದನಿ, ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್, ಶಾಸಕಿ ಶಕುಂತಳಾ ಶೆಟ್ಟಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News