ಡಿ.7ರಂದು ಕಿಲ್ಲೂರು ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ ಕಾರ್ಯಕ್ರಮ
ಬೆಳ್ತಂಗಡಿ,ಡಿ.6:ಮುಹಿಯುದ್ದೀನ್ ಜುಮಾ ಮಸೀದಿ ಕಿಲ್ಲೂರು ಇದರ ಅಂಗ ಸಂಸ್ಥೆಯಾದ ನೂರುಲ್ ಇಸ್ಲಾಂ ಯಂಗ್‍ಮೆನ್ಸ್ ಎಸೋಸಿಯೇಶನ್ ಇದರ ವತಿಯಿಂದ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಡಿ. 7 ರಂದು ಕಿಲ್ಲೂರು ಮಸೀದಿ ವಠಾರದಲ್ಲಿ ನಡೆಯಲಿದೆ.
ಸಯ್ಯದ್ ಶಿಹಾಬುದ್ದೀನ್ ಸಖಾಫಿ ಅಲ್-ಹೈದ್ರೋಸಿ ತಂಙಳ್ ಕಿಲ್ಲೂರು ಇವರ ನೇತೃತ್ವದಲ್ಲಿ ನಡೆಯುವ ಸ್ವಲಾತ್ ವಾರ್ಷಿಕ ಕಾರ್ಯಕ್ರಮದಲ್ಲಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಉಸ್ತಾದ್ ಮುಖ್ಯ ಭಾಷಣಗೈಯುವರು. ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಯ್ಯಿದ್ ಜಲಾಲುದ್ದೀನ್ ಮಲ್‍ಜಅ್ ತಂಙಳ್, ಸಯ್ಯಿದ್ ಹಬೀಬುರ್ರಹ್ಮಾನ್ ಮುಶೈಖ್ ಬಾಅಲವಿ ತಂಙಳ್ ಬೆಳಾಲು, ಸಯ್ಯಿದ್ ಅಬ್ದುಸ್ಸಲಾಂ ತಂಙಳ್, ಸಯ್ಯಿದ್ ಇಂಬಿಚ್ಚಿಕೋಯ ತಂಙಳ್, ಮಹ್ಮೂದ್ ಉಸ್ತಾದ್ ಎಡಪ್ಪಾಲ, ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಎನ್.ಕೆ.ಎಂ. ಶಾಫಿ ಸಅದಿ ಬೆಂಗಳೂರು, ಕರ್ನಾಟಕ ಸರಕಾರದ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಯೇನಪೋಯ ಅಬ್ದುಲ್ಲಾ ಕುಂಞಿ, ಮುಮ್ತಾಝ್ ಅಲಿ ಕೃಷ್ಣಾಪುರ, ಉಸ್ಮಾನ್ ಹಾಜಿ ಎಮ್ಮೆಮಾಡು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.