×
Ad

ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕತ್ವ ರದ್ದು ಸುಳ್ಳು: ಕೊಳ್ಕೆಬೈಲ್

Update: 2017-12-06 19:54 IST

ಉಡುಪಿ, ಡಿ.6: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ನನ್ನ ನಿರ್ದೇಶಕತ್ವವನ್ನು ರದ್ದು ಪಡಿಸಿರುವ ವಿಚಾರ ಸಂಪೂರ್ಣ ಸುಳ್ಳು ಎಂದು ಕಿಶನ್ ಹೆಗ್ಡೆ ಕೊಳ್ಕೆಬೈಲು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕಿನ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ನಾನು 3 ಆಡಳಿತ ಮಂಡಳಿ ಸಬೆಗೆ ಹಾಜರಾಗಿದ್ದೇನೆ. ಈ ಬಗ್ಗೆ ನನ್ನಲ್ಲಿ ದಾಖಲೆಗಳಿವೆ. ನಾನು ಗೈರು ಹಾಜರಾಗಿರುವುದಿಲ್ಲ. ನಿರ್ದೇಶಕತ್ವ ರದ್ದು ಪಡಿಸುವ ವಿಚಾರ ಸಹಕಾರ ಇಲಾಖೆ ನಿರ್ಧರಿಸಬೇಕಾಗಿದ್ದು, ಬ್ಯಾಂಕಿನ ಅಧ್ಯಕ್ಷರಿಗೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಧಿಕಾರ ಇಲ್ಲ. ಈ ಬಗ್ಗೆ ಸೂಕ್ತ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News