×
Ad

ಪುತ್ತೂರು: ನಿಷೇಧಾಜ್ಞೆ ನಡುವೆಯೇ ಕಪ್ಪು ಪತಾಕೆ ಪ್ರದರ್ಶನ

Update: 2017-12-06 20:28 IST

ಪುತ್ತೂರು: ಬಾಬರಿ ಮಸೀದಿ ಧ್ವಂಸದ 25ನೇ ವರ್ಷದ ಹಿನ್ನಲೆಯಲ್ಲಿ ಬುಧವಾರ ಪುತ್ತೂರಿನಲ್ಲಿ ಕೆಲವರು ಕರಾಳ ದಿನಾಚರಣೆಗೆ ಯತ್ನಿಸಿದ ಘಟನೆ ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕದಲ್ಲಿ ನಡೆದಿದೆ.

ನಿಷೇಧಾಜ್ಞೆ ಜಾರಿಗೊಳಿಸಿ ಯಾವುದೇ ಕರಾಳ ದಿನಾಚರಣೆ ಅಥವಾ ವಿಜಯೋತ್ಸವ ಸೇರಿದಂತೆ ಜನ ಸೇರುವ ಕಾರ್ಯಕ್ರಮ ನಡೆಸದಂತೆ ಪೊಲೀಸ್ ಇಲಾಖೆ ಸೂಚನೆ ನೀಡಿತ್ತು. ಇದರ ನಡುವೆಯೇ ಕೆಲವರು ಕೂರ್ನಡ್ಕದಲ್ಲಿ ರಸ್ತೆ ಸರ್ಕಲ್‍ಗೆ ಕಪ್ಪು ಪತಾಕೆ ಕಟ್ಟುವ ಮೂಲಕ ಕರಾಳತೆ ಪ್ರದರ್ಶಿಸಿದರು.  

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪತಾಕೆಗಳನ್ನು ತೆರವು ಮಾಡಿದರು. ನಾವು ಪತಾಕೆ ತೆರವು ಮಾಡಿದ್ದೇವೆ. ಯಾವುದೇ ಸಮಸ್ಯೆ ಉಂಟಾಗಿಲ್ಲ. ಪುತ್ತೂರಿನಲ್ಲಿ ಪರಿಸ್ಥಿತಿ ಸಂಪೂರ್ಣ ಶಾಂತಿಯಿಂದಿದೆ ಎಂದು ನಗರ ಠಾಣೆ ಇನ್‍ಸ್ಪೆಕ್ಟರ್ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News