×
Ad

ಪರಿಸರ ಮಿತ್ರ ಶಾಲಾ ಕಾರ್ಯಕ್ರಮ

Update: 2017-12-06 20:53 IST

ಮಂಗಳೂರು, ಡಿ. 6: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಹೆಚ್ಚು ಅರಿವು ಹಾಗೂ ಜಾಗೃತಿ ಮೂಡಿಸಲು 2017-18ನೆ ಸಾಲಿನಲ್ಲಿ ಪರಿಸರ ಮಿತ್ರ ಶಾಲಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಯೋಜನೆಯ ಅಡಿಯಲ್ಲಿ ಹಣ್ಣು, ಹೂ ಬಿಡುವ ಹಾಗೂ ಔಷಧಿ ಮತ್ತು ಇತರ ಸಸ್ಯಗಳನ್ನು ನೆಟ್ಟು ಹಸಿರು ಹೆಚ್ಚಿಸಿರುವ, ಶಾಲೆಗಳಲ್ಲಿ ನೀರಿನ ವ್ಯವಸ್ಥೆ, ಮಳೆ ನೀರಿನ ಕೊಯ್ಲು ವ್ಯವಸ್ಥೆ, ಪ್ಲಾಸ್ಟಿಕ್, ಜಲ, ಘನ ತ್ಯಾಜ್ಯ ನಿರ್ವಹಣೆ, ಶೌಚಾಲಯ ವ್ಯವಸ್ಥೆ, ಸೌರಶಕ್ತಿಯ ಉಪಯೋಗ, ಸಾವಯವ ಗೊಬ್ಬರ ತಯಾರಿಕೆ ಮುಂತಾದ ಪರಿಸರ ಸಂಬಂಧಿ ವಿಷಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವ 21 ಶಾಲೆಗಳನ್ನು ಗುರುತಿಸಿ ಒಟ್ಟು ನಗದು ರೂ.1,20,000 ಗಳನ್ನು, ಪ್ರಮಾಣ ಪತ್ರ, ಪಾರಿತೋಷಕ ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಶಾಲೆಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

ಈ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿರುವ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸರಕಾರಿ, ಅನುದಾನಿತ(ಖಾಸಗಿ), ಅನುದಾನರತ(ಖಾಸಗಿ), ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಸ್ವಮೌಲ್ಯಮಾಪನಾ ಪ್ರಶ್ನಾವಳಿ ಪುಸ್ತಕಗಳನ್ನು ತಾಲೂಕಿನ ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆದುಕೊಳ್ಳಬಹುದು ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ manglore@kspcb.gov.in ಇ-ಮೇಲ್‌ ಕಳುಹಿಸುವ ಮೂಲಕ ತರಿಸಿಕೊಂಡು, ಭರ್ತಿ ಮಾಡಿದ ಸ್ವಮೌಲ್ಯಮಾಪನಾ ಪ್ರಶ್ನಾವಳಿ ಪುಸ್ತಕಗಳನ್ನು ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೈಕಂಪಾಡಿ ಕೈಗಾರಿಕಾ ಪ್ರದೇಶ, ಮಂಗಳೂರು- 575011 ಇಲ್ಲಿಗೆ ಡಿಸೆಂಬರ್ 15 ರೊಳಗೆ ಸಲ್ಲಿಸಬೇಕು.

ಈ ಸ್ವಮೌಲ್ಯಮಾಪನಾ ಪ್ರಶ್ನಾವಳಿ ಪುಸ್ತಕಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಂದಲೂ ಇ-ಮೇಲ್ ಮೂಲಕ ಪಡೆಯಬಹುದು ಎಂದು ಮಂಗಳೂರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News